ರಾಜ್ಯದ 22 ಪೊಲೀಸರಿಗೆ ರಾಷ್ಟ್ರಪತಿ ಪದಕ

ಬೆಂಗಳೂರು, ಜ.24: ಗಣರಾಜ್ಯೋತ್ಸವ ಪ್ರಯುಕ್ತ ಪ್ರಾಮಾಣಿಕ ಪೊಲೀಸರಿಗೆ ನೀಡಲಾಗುವ ರಾಷ್ಟ್ರಪತಿ ಪದಕಕ್ಕೆ ರಾಜ್ಯದ 22 ಪೊಲೀಸರು ಭಾಜನರಾಗಿದ್ದಾರೆ.
ವಿಶಿಷ್ಟ ಸೇವಾ ಪದಕ ಪಡೆದ ಅಧಿಕಾರಿಗಳು:
ಡಾ.ಬಿ.ಎ.ಮಹೇಶ್ (ಡಿಐಜಿಪಿ, ನೇಮಕಾತಿ, ಬೆಂಗಳೂರು), ಟಿ.ಆರ್.ಸುರೇಶ್ (ಕಮಿಷನರ್, ಮಂಗಳೂರು ನಗರ), ಜಿ.ಎ.ಜಗದೀಶ್ (ಎಸಿಪಿ, ಟ್ರಾಫಿಕ್ ನಾರ್ಥ ಸಬ್ ಡಿವಿಷನ್, ಬೆಂಗಳೂರು ನಗರ).
ರಾಷ್ಟ್ರಪತಿ ಶ್ಲಾಘನೀಯ ಸೇವಾ ಪದಕ ಪುರಸ್ಕೃತರು:
ಆರ್.ಎಚ್.ನಾಯಕ್ (ಡಿಐಜಿಪಿ, ಇಂಟಲಿಜೆನ್ಸ್, ಬೆಂಗಳೂರು), ಹಂಜಾ ಹುಸೇನ್ (ಎಸ್ಪಿ, ಬಿಡಿಡಿಎಸ್, ಇಂಟಲಿಜೆನ್ಸ್, ಬೆಂಗಳೂರು), ಕೆ.ಪಿ.ರವಿಕುಮಾರ್ (ಎಸಿಪಿ, ಬಾಣಸವಾಡಿ ಸಬ್ ಡಿವಿಷನ್, ಬೆಂಗಳೂರು ನಗರ), ಯು.ಶರಣಪ್ಪ(ಡಿವೈಎಸ್ಪಿ, ಚಿಂಚೋಳಿ ಸಬ್ ಡಿವಿಷನ್, ಕಲಬುರಗಿ ಜಿಲ್ಲೆ), ಸಿ.ಸಂಪತ್ ಕುಮಾರ್ (ಡಿವೈಎಸ್ಪಿ, ಸೋಮವಾರಪೇಟೆ ಸಬ್ ಡಿವಿಷನ್, ಕೊಡಗು ಜಿಲ್ಲೆ), ಎನ್.ಬಿ.ಸಕ್ರಿ (ಎಸಿಪಿ, ಹುಬ್ಬಳ್ಳಿ ನಗರ ದಕ್ಷಿಣ), ಕೆ.ಎಸ್.ನಾಗರಾಜ್ (ಡಿವೈಎಸ್ಪಿ, ತುಮಕೂರು), ಬಿ.ಬಾಲರಾಜು (ಡಿವೈಎಸ್ಪಿ, ಎಸಿಬಿ, ಬೆಂಗಳೂರು), ಕೆ.ಸತ್ಯನಾರಾಯಣ (ಸಿಪಿಐ, ಕಡೂರು, ಚಿಕ್ಕಮಗಳೂರು ಜಿಲ್ಲೆ), ವಿ.ಎನ್. ಗುಣವತಿ, (ಎಎಸೈ, ಎಸ್ಸಿಆರ್ಬಿ, ಬೆಂಗಳೂರು), ಕೆ.ಆರ್.ವಿನುತಾ (ಎಎಸೈ, ಎಸ್ಸಿಆರ್ಬಿ, ಬೆಂಗಳೂರು), ಜಿ.ಶ್ರೀನಿವಾಸ ಶೆಟ್ಟಿ (ಎಚ್‌ಸಿ-5689, ಉಪ್ಪಾರಪೇಟೆ, ಬೆಂಗಳೂರು), ಬಿ.ಎಚ್.ಹೇಮಕುಮಾರ್ (ಎಚ್‌ಸಿ, ಫಾರೆಸ್ಟ್ ಸೆಲ್, ಸಿಐಡಿ, ಬೆಂಗಳೂರು), ಬಿ.ಎನ್.ಮೆಹಬೂಬ್ (ಸಿಎಚ್‌ಸಿ-70, ಟ್ರಾಫಿಕ್, ಕೋಲಾರ), ಎಲ್.ಎ.ಪಾಠಕ್ (ಸಿಎಚ್‌ಸಿ-590, ಹುಬ್ಬಳ್ಳಿ ಗ್ರಾಮಾಂತರ), ಪಿ.ಮಲ್ಲಿಕಾರ್ಜುನ ಹೆಗ್ಡೆ (ಎಚ್‌ಸಿ, ಎಸ್‌ಇಡಿ, ಸಿಐಡಿ, ಬೆಂಗಳೂರು), ಜಗನ್ನಾಥ (ಕೆಎಸ್‌ಆರ್ಪಿ ಬೆಂಗಳೂರು), ಕಮಲಾಕ್ಷ (ಕೆಎಸ್‌ಆರ್ಪಿ, ಬೆಂಗಳೂರು), ಎಂ.ಕೃಷ್ಣೋಜಿ ರಾವ್ (ಡಿಎಆರ್ ಮೈಸೂರು).





