ಸಾಲಬಾಧೆ: ಕೃಷಿಕ ಆತ್ಮಹತ್ಯೆ
ಹೆಬ್ರಿ, ಜ.24: ಕೃಷಿಗಾಗಿ ಸಾಲ ಮಾಡಿದ್ದ ಕೃಷಿರೊಬ್ಬರು ನೇಣಿಗೆ ಶರಣಾಗಿರುವ ಘಟನೆ ಜ.24ರಂದು ಬೆಳಗ್ಗೆ ಶಿವಪುರ ಗ್ರಾಮದ ಜಡ್ಡಿನಮನೆ ಎಂಬಲ್ಲಿ ನಡೆದಿದೆ.
ಮೃತರನ್ನು ಶಿವಪುರ ಗ್ರಾಮದ ಜಡ್ಡಿನಮನೆ ನಿವಾಸಿ ಮಹಾಬಲ ನಾಯ್ಕ್ (78) ಎಂದು ಗುರುತಿಸಲಾಗಿದೆ. ಕೃಷಿಕರಾಗಿರುವ ಇವರು 10 ವರ್ಷಗಳ ಹಿಂದೆ ಕೃಷಿಗಾಗಿ ಸಿಂಡಿಕೇಟ್ ಬ್ಯಾಂಕ್ ಮತ್ತು ಹೆಬ್ರಿ ವ್ಯವಸಾಯ ಬ್ಯಾಂಕ್ನಿಂದ ಕೃಷಿ ಸಾಲ ಮಾಡಿದ್ದರು. ಆರ್ಥಿಕ ಸಮಸ್ಯೆಯಿಂದಾಗಿ ಅವರಿಗೆ ಸಾಲದ ಕಂತು ಪಾವತಿಸಲು ಸಾಧ್ಯವಾಗಿರಲಿಲ್ಲ.
ಇದೇ ಕಾರಣಕ್ಕೆ ಸಿಂಡಿಕೇಟ್ ಬ್ಯಾಂಕ್ ಮತ್ತು ವ್ಯವಸಾಯ ಬ್ಯಾಂಕ್ನಿಂದ ಅವರಿಗೆ ನೋಟೀಸ್ ಜಾರಿಯಾಗಿತ್ತು. ಈ ಬಗ್ಗೆ ಮನನೊಂದ ಅವರು ಸಾಲದ ಬಾದೆಯಿಂದ ಮನೆಯ ಬಳಿಯ ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿ ಕೊಂಡಿದ್ದಾರೆ. ಈ ಬಗ್ಗೆ ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





