ಮಟ್ಕಾ ವಿರುದ್ಧ ಕಾರ್ಯಾಚರಣೆ: 17 ಮಂದಿ ಬಂಧನ
ಉಡುಪಿ, ಜ.24: ಮಟ್ಕಾ ದಂಧೆ ವಿರುದ್ಧ ಕಾರ್ಯಾಚರಣೆಗೆ ಇಳಿದಿರುವ ಪೊಲೀಸರು ಕಳೆದ ಮೂರು ದಿನಗಳಿಂದ ಜಿಲ್ಲೆಯಾದ್ಯಂತ ಒಟ್ಟು ಪ್ರಕರಣ ದಾಖಲಿಸಿ ಮಂದಿಯನ್ನು ಬಂಧಿಸಿದ್ದಾರೆ.
ಉಡುಪಿಯ ಸೆನ್ ಪೊಲೀಸರು ಜ.24ರಂದು ಮಣಿಪಾಲ ಇಂಡಸ್ಟ್ರೀ ಯಲ್ ಏರಿಯಾದಲ್ಲಿ ನಿಟ್ಟೂರು ಅಡ್ಕದಕಟ್ಟೆಯ ಕರುಣಾಕರ ಎಸ್.ಸಾಲಿ ಯಾನ್(29), ಜ.23ರಂದು ಸಾಂತೂರು ಗ್ರಾಮದ ಮುದರಂಗಡಿ ಎಂಬಲ್ಲಿ ನಿಟ್ಟೂರಿನ ದಿನೇಶ್ ಶೆಟ್ಟಿ(48), ಜ.22ರಂದು ಕಟಪಾಡಿ ಫಿಶ್ ಮಾರ್ಕೆಟ್ ಬಳಿ ಕಟಪಾಡಿಯ ಹರೀಶ್ ದೇವಾಡಿಗ(42), ಕಟಪಾಡಿ ಅರೋಜ ಬೇಕರಿ ಬಳಿ ಅಗ್ರಹಾರದ ರಮೇಶ್ ಪೂಜಾರಿ(38), ನಾಗೂರು ಬಸ್ ನಿಲ್ದಾಣದ ಬಳಿ ಉಳ್ಳೂರು-ಉಪ್ರಳ್ಳಿಯ ಸುಬ್ಬ ಪೂಜಾರಿ(65) ಎಂಬಾತನನ್ನು ಬಂಧಿಸಿದ್ದಾರೆ.
ಜ.23ರಂದು ಕಾಪು ಪೊಲೀಸ್ ಠಾಣಾ ವ್ಯಾಪ್ತಿಯ ಕಟಪಾಡಿ ಜಂಕ್ಷನ್ ಬಳಿ ಅಂಬಾಗಿಲಿನ ಸುರೇಶ್(37) ಎಂಬಾತನನ್ನು 2350ರೂ. ನಗದು ಸಹಿತ, ಕಾರ್ಕಳ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ತೆಳ್ಳಾರ್ ರಸ್ತೆಯ ಗುಡ್ಡೆಯಂಗಡಿ ಸಮೀಪ ದೂಪದಕಟ್ಟೆಯ ಜೋಕಿಂ ಪಿಂಟೋ(40), ಜ.22ರಂದು ಬ್ರಹ್ಮಾವರ ಪೊಲೀಸ್ ಠಾಣಾ ವ್ಯಾಪ್ತಿಯ ಪೇತ್ರಿ ಮಾರ್ಕೇಟ್ ಬಳಿ ಪೇತ್ರಿಯ ರೋಕಿ ಡಿಸೋಜ(53) ಮತ್ತು ಕರ್ಜೆಯ ಸುರೇಶ ವೈ.ಶೆಟ್ಟಿ (53), ಉಪ್ಪಿನಕೋಟೆ ಮೈನ್ ರಸ್ತೆಯ ಬಳಿ ಹಂದಾಡಿಯ ಸದಾನಂದ ಪೂಜಾರಿ(49), ಮಲ್ಪೆಪೊಲೀಸ್ ಠಾಣಾ ವ್ಯಾಪ್ತಿಯ ಕದಿಕೆ ಜಂಕ್ಷನ್ ಎಂಬಲ್ಲಿ 1,450 ರೂ. ನಗದು ಸಹಿತ ಸತೀಶ ಕಡೆಕಾರು, ಮಲ್ಪೆಬಸ್ ನಿಲ್ದಾಣದ ಬಳಿ 1390 ರೂ. ನಗದು ಸಹಿತ ಹೆಜಮಾಡಿಯ ಉದಯ, ಹೂಡೆಯ ಸಿಂಡಿಕೇಟ್ ಬ್ಯಾಂಕ್ ಬಳಿ ಲಕ್ಷ್ಮೀನಗರದ ಭಾಸ್ಕರ್ ಶೆಟ್ಟಿ(57), ಮಧ್ವನಗರ ಬಸ್ ನಿಲ್ದಾಣ ಬಳಿ 1610ರೂ. ನಗದು ಸಹಿತ ನಿಟ್ಟೂರಿನ ಹರ್ಷ(22), ಗಂಗೊಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಕಂಚಿಗೋಡು ಜಂಕ್ಷನ್ ಬಳಿ 1,460ರೂ. ಹಣದೊಂದಿಗೆ ಗುಜ್ಜಾಡಿಯ ವಲ್ಲಿ ಡಯಾಸ್(64), ಗಂಗೊಳ್ಳಿಯ ವಾಟರ್ ಟ್ಯಾಂಕ್ ಬಳಿ 1,170 ನಗದಿನೊಂದಿಗೆ ಗುಜ್ಜಾಡಿಯ ರವಿ(34), ಬೈಂದೂರು ಪೊಲೀಸ್ ಠಾಣಾ ವ್ಯಾಪ್ತಿಯ ಉಪ್ಪುಂದ ಗ್ರಾಮದ ಶಾಲೆ ಬಾಗಿಲು ಬಳಿ ಅರೆಹೊಳೆಯ ಸುದರ್ಶನ ದೇವಾಡಿಗ(49) ಎಂಬವರನ್ನು ಪೊಲೀಸರು ಬಂಧಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.







