ಲಿಬಿಯದಲ್ಲಿ ಅವಳಿ ಸ್ಫೋಟ: 22 ಸಾವು

ಬೆಂಗಾಝಿ (ಲಿಬಿಯ), ಜ. 24: ಲಿಬಿಯ ಬೆಂಗಾಝಿ ನಗರದಲ್ಲಿ ಮಂಗಳವಾರ ರಾತ್ರಿ ಸಂಭವಿಸಿದ ಅವಳಿ ಬಾಂಬ್ ಸ್ಫೋಟಗಳಲ್ಲಿ ಕನಿಷ್ಠ 22 ಮಂದಿ ಮೃತಪಟ್ಟಿದ್ದಾರೆ ಹಾಗೂ 20 ಮಂದಿ ಗಾಯಗೊಂಡಿದ್ದಾರೆ.
ಬೆಂಗಾಝಿಯ ಅಲ್-ಸ್ಲೇಮಾನಿ ಉಪನಗರದ ಮಸೀದಿಯೊಂದರ ಎದುರು ಸ್ಫೋಟಕಗಳಿಂದ ತುಂಬಿದ್ದ ವಾಹನವೊಂದು ಸ್ಫೋಟಗೊಂಡಿತು ಎಂದು ಭದ್ರತಾ ಮೂಲವೊಂದು ತಿಳಿಸಿದೆ.
ಎರಡನೆಯ ಘಟನೆಯಲ್ಲಿ, 30 ನಿಮಿಷಗಳ ಬಳಿಕ ಅದೇ ಸ್ಥಳದಲ್ಲಿ ಇನ್ನೊಂದು ಕಾರ್‌ಬಾಂಬ್ ಸ್ಫೋಟಗೊಂಡಿತು. ಎರಡನೆ ಸ್ಫೋಟದಲ್ಲಿ ಭದ್ರತಾ ಸಿಬ್ಬಂದಿ ಮತ್ತು ನಾಗರಿಕರು ಹೆಚ್ಚಿನ ಸಂಖ್ಯೆಯಲ್ಲಿ ಸಾವಿಗೀಡಾದರು.
2011ರಲ್ಲಿ ಲಿಬಿಯದಲ್ಲಿ ನಡೆದ ಬಂಡಾಯದ ಬಳಿಕ ಆ ದೇಶ ಅರಾಜಕತೆಗೆ ಜಾರಿದೆ. ಬಂಡಾಯದ ವೇಳೆ, ಅಂದಿನ ದೇಶದ ಮುಖ್ಯಸ್ಥ ಮುಅಮ್ಮರ್ ಗಡ್ಡಾಫಿಯನ್ನು ಅಧಿಕಾರದಿಂದ ಕೆಳಗಿಳಿಸಿ ಹತ್ಯೆ ನಡೆಸಲಾಗಿತ್ತು. ತೈಲ ಸಮೃದ್ಧ ದೇಶದ ನಿಯಂತ್ರಣಕ್ಕಾಗಿ ಎರಡು ಅಧಿಕಾರ ಕೇಂದ್ರಗಳು ಮತ್ತು ಹಲವು ಗುಂಪುಗಳು ಶ್ರಮಿಸುತ್ತಿವೆ.
Next Story





