ಸುರತ್ಕಲ್: ಮಲಿಹಾ ಉಡುಪುಗಳು ಮಳಿಗೆ ಶುಭಾರಂಭ

ಸುರತ್ಕಲ್, ಜ. 25: ಸುರತ್ಕಲ್‌ನಲ್ಲಿ ಮಹಿಳೆಯರ ಸಿದ್ಧ ಉಡುಪುಗಳ ಮಳಿಗೆ 'ಮಲಿಹಾ' ಗುರುವಾರ ಬೆಳಗ್ಗೆ ಶುಭಾರಂಭಗೊಂಡಿತು.
ಶಾಸಕ ಮೊಯ್ದಿನ್ ಬಾವ ಮಳಿಗೆಯನ್ನು ಉದ್ಘಾಟಿಸಿ ಶುಭಹಾರೈಸಿದರು.
ಕಾಪು ಶಾಸಕ ವಿನಯ ಕುಮಾರ್ ಸೊರಕೆ ಶುಭಹಾರೈಸಿದರು. ಈ ಸಂದರ್ಭದಲ್ಲಿ ಮಳಿಗೆಯ ಮಾಲಕ ಅಬ್ದುಲ್ ಖಾದರ್, ಕನ್ನಂಗಾರ್ ಜುಮಾ ಮಸೀದಿ ಅಧ್ಯಕ್ಷ ಎಚ್.ಬಿ. ಮುಹಮ್ಮದ್, ಉಡುಪಿ ತಾಲ್ಲೂಕು ಕೆಡಿಪಿ ಸದಸ್ಯ ಯು.ಕೆ. ಅಬ್ದುಲ್ ಹಮೀದ್, ಅನಿವಾಸಿ ಉದ್ಯಮಿ ಕೆ.ಯು. ಮುಹಮ್ಮದ್, ಅಬ್ದುಲ್ ರಶೀದ್ ಉಪಸ್ಥಿತರಿದ್ದರು.
ಎಂಆರ್‌ಪಿಎಲ್ ರಸ್ತೆಯ ಕುಡುವಾಸ್ ಗ್ರೇಡಿಯರ್ ಕಟ್ಟಡದ ಮೊದಲ ಮಹಡಿಯಲ್ಲಿರುವ ಮಲಿಹಾ ಮಳಿಗೆಯಲ್ಲಿ ಮಹಿಳೆಯರ ವಿವಿಧ ಮಾದರಿಯ ಚೂಡಿದಾರ, ಹೊಸ ವಿನ್ಯಾಸಗಳ ಸಿದ್ಧ ಉಡುಪುಗಳು ದೊರಕುತ್ತವೆ. ಮಿತ ದರದಲ್ಲಿ, ಗುಣಮಟ್ಟದ ಹೊಸ ಸಂಗ್ರಹಗಳು ಇವೆ ಎಂದು ಮಾಲಕ ಅಬ್ದುಲ್ ಖಾದರ್ ತಿಳಿಸಿದ್ದಾರೆ.
Next Story





