ಮೂರನೇ ಟೆಸ್ಟ್: ದಕ್ಷಿಣ ಆಫ್ರಿಕ 194 ರನ್‌ಗೆ ಆಲೌಟ್
ಅಮ್ಲ ಅರ್ಧಶತಕ, ಬುಮ್ರಾಗೆ 5 ವಿಕೆಟ್

ಜೋಹಾನ್ಸ್‌ಬರ್ಗ್, ಜ.25: ಜಸ್‌ಪ್ರಿತ್ ಬುಮ್ರಾ ಹಾಗೂ ಭುವನೇಶ್ವರ ಕುಮಾರ್ ಉತ್ತಮ ಬೌಲಿಂಗ್ ದಾಳಿಯ ನೆರವಿನಿಂದ ಭಾರತ ತಂಡ ಆತಿಥೇಯ ದಕ್ಷಿಣ ಆಫ್ರಿಕವನ್ನು ಮೂರನೇ ಟೆಸ್ಟ್‌ನ ಮೊದಲ ಇನಿಂಗ್ಸ್‌ನಲ್ಲಿ ಕೇವಲ 194 ರನ್‌ಗೆ ಸರ್ವಪತನಗೊಳಿಸಿದೆ.
ಎರಡನೇ ದಿನವಾದ ಗುರುವಾರ 1 ವಿಕೆಟ್ ನಷ್ಟಕ್ಕೆ 6 ರನ್‌ನಿಂದ ಬ್ಯಾಟಿಂಗ್ ಮುಂದುವರಿಸಿದ ದಕ್ಷಿಣ ಆಫ್ರಿಕ ತಂಡ ಹಾಶಿಮ್ ಅಮ್ಲ(61, 121 ಎಸೆತ, 7 ಬೌಂಡರಿ), ವೆರ್ನಾನ್ ಫಿಲ್ಯಾಂಡರ್(35) ಹಾಗೂ ಕಾಗಿಸೊ ರಬಾಡ(30) ಹೋರಾಟದ ಹೊರತಾಗಿಯೂ 65.5 ಓವರ್‌ಗಳಲ್ಲಿ 194 ರನ್ ಗಳಿಸಿ ಕೇವಲ 7 ರನ್ ಮುನ್ನಡೆ ಪಡೆದಿದೆ.
ಲುಂಗಿ ಗಿಡಿ(0) ವಿಕೆಟ್ ಕಬಳಿಸುವ ಮೂಲಕ ದಕ್ಷಿಣ ಆಫ್ರಿಕದ ಇನಿಂಗ್ಸ್‌ಗೆ ತೆರೆ ಎಳೆದ ಬುಮ್ರಾ ಮೊದಲ ಬಾರಿ ಐದು ವಿಕೆಟ್ ಗೊಂಚಲು(5-54) ಪಡೆದು ಗಮನ ಸೆಳೆದರು. ಭುವನೇಶ್ವರ್(3-44), ಇಶಾಂತ್ ಶರ್ಮ(1-33), ಮುಹಮ್ಮದ್ ಶಮಿ(1-46) ಬುಮ್ರಾಗೆ ಸಾಥ್ ನೀಡಿದರು.
ಭಾರತ ಮೊದಲದಿನವಾದ ಬುಧವಾರ ಮೊದಲ ಇನಿಂಗ್ಸ್‌ನಲ್ಲಿ 187 ರನ್ ಗಳಿಸಿ ಆಲೌಟಾಗಿದೆ.
Next Story





