ಸಫಾಯಿ ಕರ್ಮಚಾರಿಗಳ ಬೇಡಿಕೆಗೆ ತಕ್ಷಣ ಸ್ಪಂದಿಸಿ: ಪ್ರಮೋದ್

ಉಡುಪಿ, ಜ.25: ಸಫಾಯಿ ಕರ್ಮಚಾರಿಗಳಿಗೆ (ಹಿಂದಿನ ಪೌರ ಕಾರ್ಮಿಕರು) ಲಭ್ಯವಿರುವ ಎಲ್ಲಾ ಸೌಲಭ್ಯಗಳನ್ನು ಸೂಕ್ತ ರೀತಿಯಲ್ಲಿ ಒದಗಿಸುವಂತೆ ಹಾಗೂ ಅವರ ಬೇಡಿಕೆಗಳಿಗೆ ತಕ್ಷಣವೇ ಸ್ಪಂದಿಸುವಂತೆ ಎಲ್ಲಾ ಇಲಾಖೆಗಳ ಅಧಿಕಾರಿಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮದ್ವರಾಜ್ ಸೂಚಿಸಿದ್ದಾರೆ.
ಗುರುವಾರ ಮಣಿಪಾಲದ ಅಟಲ್ ಬಿಹಾರಿ ವಾಜಪೇಯಿ ಸಭಾಂಗಣದಲ್ಲಿ ಸಫಾಯಿ ಕರ್ಮಚಾರಿಗಳ ಆಯೋಗ ಬೆಂಗಳೂರು, ಜಿಲ್ಲಾಡಳಿತ, ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ ಹಾಗೂ ಜಿಲ್ಲೆಯ ನಗರ ಸ್ಥಳೀಯ ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾಗಿದ್ದ, ಸಫಾಯಿ ಕರ್ಮಚಾರಿಗಳ/ಮ್ಯಾನ್ಯುಯಲ್ ಸ್ಕ್ಯಾವೆಂಜರುಗಳ ವೃತ್ತಿ ನಿಷೇಧ ಮತ್ತು ಪುರ್ನವಸತಿ ಅಧಿನಿಯಮ-2013ರಡಿ ಸರಕಾರದ ಕಾನೂನುಗಳು ಹಾಗೂ ಸರಕಾರದ ವಿವಿಧ ಇಲಾಖೆಗಳಿಂದ ದೊರೆಯುವ ಸೌಲಭ್ಯಗಳ ಬಗ್ಗೆ ಅರಿವು ಮೂಡಿಸುವ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.
ಸಫಾಯಿ ಕರ್ಮಚಾರಿಗಳು ಸಮಾಜದ ಬಹುಮುಖ್ಯ ಅಂಗ. ಅವರೇ ಈ ಸಮಾಜದಲ್ಲಿ ಅತೀಯಾದ ತುಳಿತಕ್ಕೊಳಗಾದ ಹಾಗೂ ಶೋಷಣೆಗೊಳಗಾ ದವರು ಸಹ ಆಗಿದ್ದಾರೆ. ಇಡೀ ನಗರವನ್ನು ಸ್ವಚ್ಛವಾಗಿಡುವ ಮಹತ್ವದ ಜವಾಬ್ದಾರಿ ಇವರ ಮೇಲಿದೆ. ಇವರಿಗೆ ಸರಕಾರದ ವಿವಿಧ ಇಲಾಖೆಗಳಿಂದ ದೊರಕುವ ಯೋಜನೆಗಳ ಕುರಿತು ಅರಿವು ಮೂಡಿಸಿ ಹಾಗೂ ಅವರ ಬೇಡಿಕೆ ಗಳಿಗೆ ತಕ್ಷಣ ಸ್ಪಂದಿಸಿ ಎಂದು ಅಧಿಕಾರಿಗಳಿಗೆ ಆದೇಶಿಸಿದರು.
ಸಫಾಯಿ ಕರ್ಮಚಾರಿಗಳ ಮಕ್ಕಳಿಗೆ ಮೊರಾರ್ಜಿ ದೇಸಾಯಿ ವಸತಿ ಶಾಲೆ ಯಲ್ಲಿ ಸಂಪೂರ್ಣ ಉಚಿತ ಪ್ರವೇಶ ಹಾಗೂ ಶಿಕ್ಷಣ ದೊರೆಯಲಿದೆ. ಅದನ್ನು ಬಳಸಿಕೊಳ್ಳುವಂತೆ ಹಾಗೂ ಅಂಬೇಡ್ಕರ್ ತಿಳಿಸಿದಂತೆ, ಶಿಕ್ಷಣ, ಸಂಘಟನೆ ಮತ್ತು ಹೋರಾಟದ ಮೂಲಕ ಸಮಾಜದಲ್ಲಿ ಮುಖ್ಯ ವಾಹಿನಿಗೆ ಬರುವಂತೆ ಸಫಾಯಿ ಕರ್ಮಚಾರಿಗಳಿಗೆ ಪ್ರಮೋದ್ ಕಿವಿಮಾತು ಹೇಳಿದರು.
ಗುತ್ತಿಗೆ ರದ್ದು: ಪ್ರಾಸ್ತಾವಿಕವಾಗಿ ಮಾತನಾಡಿದ, ಬೆಂಗಳೂರು ರಾಷ್ಟ್ರೀಯ ಕಾನೂನು ಶಾಲೆ ತಳ ಸಮುದಾಯ ಅಧ್ಯಯನ ಕೇಂದ್ರದ ಸಂಶೋಧನಾ ಸಹಾಯಕ ಡಾ.ಆರ್. ವಿ.ಚಂದ್ರಶೇಖರ್ ಮಾತನಾಡಿ, ದೇಶದಲ್ಲಿ ಪ್ರಥಮ ಬಾರಿಗೆ ತಲೆ ಮೇಲೆ ಮಲ ಹೊರುವ ಪದ್ಧತಿಯನ್ನು ನಿಷೇಧಿಸಿದ್ದು ಕರ್ನಾಟಕ ದಲ್ಲಿ. ಸಚಿವ ಬಸವಲಿಂಗಪ್ಪ ಅವರು ಈ ಐತಿಹಾಸಿಕ ಕ್ರಮ ಕೈಗೊಂಡ ಬಳಿಕ 1993ರಲ್ಲಿ ದೇಶದಲ್ಲಿ ಈ ಪದ್ದತಿಯನ್ನು ನಿಷೇಧಿಸಲಾಯಿತು ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ, ಬೆಂಗಳೂರು ರಾಷ್ಟ್ರೀಯ ಕಾನೂನು ಶಾಲೆ ತಳ ಸಮುದಾಯ ಅ್ಯಯನಕೇಂದ್ರದಸಂಶೋನಾ ಸಹಾಯಕ ಡಾ.ಆರ್. ವಿ.ಚಂದ್ರಶೇಖರ್ ಮಾತನಾಡಿ, ದೇಶದಲ್ಲಿ ಪ್ರಥಮ ಬಾರಿಗೆ ತಲೆ ಮೇಲೆ ಮಲ ಹೊರುವ ಪದ್ಧತಿಯನ್ನು ನಿಷೇಧಿಸಿದ್ದು ಕರ್ನಾಟಕದಲ್ಲಿ. ಸಚಿವ ಬಸವಲಿಂಗಪ್ಪ ಅವರು ಈ ಐತಿಹಾಸಿಕ ಕ್ರಮ ಕೈಗೊಂಡ ಬಳಿಕ 1993ರಲ್ಲಿ ದೇಶದಲ್ಲಿ ಈ ಪದ್ದತಿಯನ್ನು ನಿಷೇಧಿಸಲಾಯಿತು ಎಂದರು.
ಈ ಹಿಂದಿನ ಕಾಯಿದೆಯಲ್ಲಿ ವೃತ್ತಿಯಲ್ಲಿ ನಿರತರಾಗಿರುವವರು ಹಾಗೂ ಇದನ್ನು ಮಾಡಿಸುವರಿಬ್ಬರಿಗೂ ಕಠಿಣ ಶಿಕ್ಷೆ ಇದ್ದುದರಿಂದ ಯಾರೂ ಈ ಬಗ್ಗೆ ದೂರು ನೀಡುತ್ತಿರಲಿಲ್ಲ. ಇದರಿಂದ 2013ರಲ್ಲಿ ಆಗಿನ ‘ಸಫಾಯಿ ಕರ್ಮಚಾರಿಗಳ/ಮ್ಯಾನ್ಯುಯಲ್ ಸ್ಕ್ಯಾವೆಂಜರುಗಳ ವೃತ್ತಿ ನಿಷೇಧ ಮತ್ತು ಪುರ್ನವಸತಿ ಅಧಿನಿಯಮ-2013’ ಜಾರಿಗೊಳಿಸಲಾಗಿದೆ. ಇದರಲ್ಲಿ ಈ ವೃತ್ತಿಯಲ್ಲಿರುವವರಿಗೆ ಪುರ್ನವಸತಿ ಒದಗಿಸಲು ಇಂತಹವರನ್ನು ಗುರುತಿಸಿ ಗುರುತಿನ ಚೀಟಿ ನೀಡಿ, ಸೌಲಭ್ಯಗಳನ್ನು ನೀಡಲು ಅವಕಾಶಗಳಿವೆ ಎಂದರು.
ಸಫಾಯಿ ಕರ್ಮಚಾರಿಗಳಿಗೆ ಬೇರೆ ಸ್ವಉದ್ಯೋಗ ಮಾಡಲು 10 ಲಕ್ಷ ರೂ. ವರೆಗೆ ಸಹಾಯಧನ ನೀಡಲಾಗುವುದು. ಅವರ ಮಕ್ಕಳಿಗೆ ಮೊರಾರ್ಜಿ ದೇಸಾಯಿ ವಸತಿ ಶಾಲೆಗಳಲ್ಲಿ ಉಚಿತ ಪ್ರವೇಶ, ವಿಶೇಷ ವಿದ್ಯಾರ್ಥಿ ವೇತನ ನೀಡಲಾಗುತ್ತದೆ ಎಂದರು. ಇನ್ನು ಮುಂದೆ ಅವರನ್ನು ಎಲ್ಲೂ ಸಹ ಪೌರ ಕಾರ್ಮಿಕರೆಂದು ಕರೆಯುವಂತಿಲ್ಲ. ಈಗ ಅವರನ್ನು ಸಫಾಯಿ ಕರ್ಮಚಾರಿ ಗಳೆಂದೇ ಗುರುತಿಸಲಾಗುವುದು. ಇವರನ್ನು ಗುತ್ತಿಗೆ ಆಧಾರದಲ್ಲಿ ನೇಮಕ ಮಾಡುವ ಪದ್ದತಿ ರದ್ದಾಗಿದ್ದು, ಇವರಿಗೆ ಸಂಬಂಧಪಟ್ಟ ಸ್ಥಳೀಯ ಸಂಸ್ಥೆ ಯಿಂದಲೇ ಕಾರ್ಮಿಕ ಇಲಾಖೆ ನಿಗದಿಪಡಿಸಿದ ವೇತನ ಪಾವತಿಸಲಾಗುವುದು. ಕಡ್ಡಾಯವಾಗಿ ಪಿಎಫ್‌ಐ ಹಾಗೂ ಇಎಸ್‌ಐ ಸೌಲ್ಯ ನೀಡಬೇಕು. ಅಧಿಕಾರಿ ಗಳು ಅವರಿಗೆ ಲಭ್ಯವಿರುವ ಯೋಜನೆಗಳ ಕುರಿತು ಅರಿವು ಮೂಡಿಸಬೇಕು ಹಾಗೂ ಸಫಾಯಿ ಕರ್ಮಚಾರಿಳು ಜಾಗೃತರಾಗಬೇಕು ಎಂದರು.
ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್, ಜಿಪಂ ಸಿಇಓ ಶಿವಾನಂದ ಕಾಪಶಿ, ಜಿಪಂ ಅಧ್ಯಕ್ಷ ದಿನಕರ ಬಾಬು, ಉಪಾಧ್ಯಕ್ಷೆ ಶೀಲಾ ಶೆಟ್ಟಿ, ಉಡುಪಿ ನಗರಸಭೆ ಅಧ್ಯಕ್ಷೆ ಮೀನಾಕ್ಷಿ ಮಾಧವ ಬನ್ನಂಜೆ, ಸಾಲಿಗ್ರಾಮ ಪಟ್ಟಣ ಪಂಚಾಯತ್ ಅಧ್ಯಕ್ಷೆ ರತ್ನಾ ನಾಗರಾಜ ಗಾಣಿಗ ಉಪಸ್ಥಿತರಿದ್ದರು. ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಎಸ್.ಎನ್. ರಮೇಶ್ ಸ್ವಾಗತಿಸಿ, ಅಂಬೇಡ್ಕರ್ ಅಭಿವೃದ್ದಿ ನಿಗಮದ ವ್ಯವ್ಥಾಪಕ ದೇವರಾಜ್ ವಂದಿಸಿದರು.







