ಅಖಿಲ ಭಾರತ ರಾ.ಮೀನುಗಾರರ ಕಾಂಗ್ರೆಸ್ ಕಾರ್ಯದರ್ಶಿಯಾಗಿ ಕಿರಣ್

ಉಡುಪಿ, ಜ.25: ಉಡುಪಿ ತಾಪಂನ ಮಾಜಿ ಸದಸ್ಯ ಹಾಗೂ ಉದ್ಯಾವರ ಗ್ರಾಪಂನ ಸದಸ್ಯ ಕಿರಣ್‌ಕುಮಾರ್ ಉದ್ಯಾವರ ಇವರನ್ನು ಅಖಿಲ ಭಾರತ ರಾಷ್ಟ್ರೀಯ ಮೀನುಗಾರ ಕಾಂಗ್ರೆಸ್‌ನ ಕಾರ್ಯದರ್ಶಿಯಾಗಿ ನೇಮಿಸಲಾಗಿದೆ.
ಕರ್ನಾಟಕ ಪ್ರದೇಶ ಕಾಂಗ್ರೆಸ್ ನಾಯಕರ ಶಿಫಾರಸ್ಸಿನ ಮೇರೆಗೆ ಅಖಿಲ ಭಾರತ ರಾಷ್ಟ್ರೀಯ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರ ಒಪ್ಪಿಗೆ ಮೇರೆಗೆ ಈ ನೇಮಕ ಮಾಡಲಾಗಿದೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ಜನಾರ್ದನ ದ್ವಿವೇದಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಟಿ.ಎನ್.ಪ್ರತಾಪನ್ ಅಧ್ಯಕ್ಷತೆಯ ರಾ. ಮೀನುಗಾರ ಕಾಂಗ್ರೆಸ್‌ಗೆ ಆರು ಮಂದಿ ಉಪಾಧ್ಯಕ್ಷರು, ಐವರು ಪ್ರಧಾನ ಕಾರ್ಯದರ್ಶಿಗಳು ಹಾಗೂ 11 ಮಂದಿ ಕಾರ್ಯದರ್ಶಿಗಳೊಂದಿಗೆ 22 ಮಂದಿ ಕಾರ್ಯಕಾರಿ ಸದಸ್ಯರನ್ನು ನೇಮಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.
Next Story





