Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. 60 ಕೋ.ರೂ.ವೆಚ್ಚದ ಹೈಸ್ಪೀಡ್ ರೈಲಿನ...

60 ಕೋ.ರೂ.ವೆಚ್ಚದ ಹೈಸ್ಪೀಡ್ ರೈಲಿನ ಪ್ರಾಯೋಗಿಕ ಸಂಚಾರ ವಿಫಲ

ವಾರ್ತಾಭಾರತಿವಾರ್ತಾಭಾರತಿ25 Jan 2018 9:17 PM IST
share
60 ಕೋ.ರೂ.ವೆಚ್ಚದ ಹೈಸ್ಪೀಡ್ ರೈಲಿನ ಪ್ರಾಯೋಗಿಕ ಸಂಚಾರ ವಿಫಲ

ಮುಂಬೈ,ಜ.25: ಅತ್ಯಧಿಕ ವೇಗದ ಲೋಕಲ್ ರೈಲಿನಲ್ಲಿ ಪ್ರಯಾಣಿಸುವ ಮುಂಬಯಿಗರ ಕನಸು ನುಚ್ಚುನೂರಾಗಿದೆ. ಈ ವಿಶೇಷ ರೈಲು ಸರಿಸುಮಾರಾಗಿ ದೇಶದಲ್ಲಿಯೇ ಅತ್ಯಂತ ವೇಗದ ರೈಲಾಗಿರುವ ಗತಿಮಾನ್ ಎಕ್ಸ್‌ಪ್ರೆಸ್‌ನ ವೇಗದಲ್ಲಿಯೇ ಸಂಚರಿಸಬೇಕಿತ್ತು. ಆದರೆ ಅದರ ನಿರ್ಮಾಣಕ್ಕಾಗಿ ಮತ್ತು ಪ್ರಾಯೋಗಿಕ ಓಡಾಟಗಳಿಗಾಗಿ 60 ಕೋ.ರೂ.ಗಳು ಮತ್ತು ಆರು ವರ್ಷಗಳನ್ನು ವ್ಯಯಿಸಿದ ಬಳಿಕ ಅಂತಿಮವಾಗಿ ರೈಲ್ವೆ ಅಧಿಕಾರಿಗಳು ಈ ತಥಾಕಥಿತ ಹೈಸ್ಪೀಡ್ ರೈಲು ಸಾಮಾನ್ಯ ಲೋಕಲ್ ರೈಲಿಗಿಂತ ಹೆಚ್ಚಿನ ವೇಗವನ್ನು ಹೊಂದಿಲ್ಲ ಎನ್ನುವುದನ್ನು ಒಪ್ಪಿಕೊಂಡಿದ್ದಾರೆ.

 ದೋಷಪೂರಿತ ಬೋಗಿ ವಿನ್ಯಾಸದಿಂದಾಗಿ ಪ್ರತಿ ಗಂಟೆಗೆ 140 ಕಿ.ಮೀ.ವೇಗದಲ್ಲಿ ಪ್ರಾಯೋಗಿಕ ಓಡಾಟ ನಡೆಸುವಲ್ಲಿ ಈ ರೈಲು ವಿಫಲಗೊಂಡಿದೆ ಎಂದು ಲಕ್ನೋದ ರೇಲ್ ಡಿಸೈನ್ಸ್ ಆ್ಯಂಡ್ ಸ್ಟಾಂಡರ್ಡ್ಸ್ ಆರ್ಗನೈಸೇಷನ್(ಆರ್‌ಡಿಎಸ್‌ಒ) ತಿಳಿಸಿದೆ.

 ಪಶ್ಚಿಮ ರೈಲ್ವೆಯು ಹೈಸ್ಪೀಡ್ ಎಂಆರ್‌ವಿಸಿ 1181 ರೈಲಿನ ಪರೀಕ್ಷೆಯನ್ನು 2012ರಲ್ಲಿಯೇ ಆರಂಭಿಸಿತ್ತು. ಆದರೆ ಅದು ಎಂದಿನಿಂದ ಸೇವೆಗೆ ಲಭ್ಯವಾಗಲಿದೆ ಎನ್ನುವುದನ್ನು ಅಧಿಕಾರಿಗಳು ಬಾಯಿ ಬಿಟ್ಟಿರಲಿಲ್ಲ. ಇದೀಗ ಮಾಹಿತಿ ಹಕ್ಕು ಕಾಯ್ದೆಯಡಿ ಪ್ರಯಾಣಿಕರೋರ್ವರ ವಿಚಾರಣೆಗಳಿಗೆ ನೀಡಿರುವ ಉತ್ತರದಲ್ಲಿ ಅಧಿಕಾರಿಗಳು 60 ಕೋ.ರೂ.ವೆಚ್ಚದ ಈ ಯೋಜನೆ ಸಂಪೂರ್ಣವಾಗಿ ವಿಫಲಗೊಂಡಿರುವುದನ್ನು ಒಪ್ಪಿಕೊಂಡಿದ್ದಾರೆ.

ಗತಿಮಾನ್ ಎಕ್ಸ್‌ಪ್ರೆಸ್ ಗಂಟೆಗೆ 160 ಕಿ.ಮೀ.ವೇಗದಲ್ಲಿ ಚಲಿಸುತ್ತದೆ. ಮುಂಬಯಿಗರಿಗೆ ಗಂಟೆಗೆ 140-145 ಕಿ.ಮೀ.ವೇಗದಲ್ಲಿ ಚಲಿಸುವ ಲೋಕಲ್ ರೈಲಿನ ಭರವಸೆಯನ್ನು ನೀಡಲಾಗಿತ್ತು. ಈ ಭರವಸೆ ಈಡೇರುವ ಬದಲು ಮುಂಬೈನ ಅತ್ಯಂತ ವೇಗದ ರೈಲು ಈಗ ವಿರಾರ್ ಕಾರ್ ಶೆಡ್‌ನಲ್ಲಿ ಮೂಲೆಗುಂಪಾಗಿದೆ. ಅದರ ಬಿಡಿಭಾಗಗಳನ್ನು ತೆಗೆದು ಇತರ ರೈಲುಗಳಲ್ಲಿ ಬಳಸಲಾಗಿದೆ. ಈ ‘ಹೈಸ್ಪೀಡ್ ರೈಲು’ ಇತರ ಯಾವುದೇ ಲೋಕಲ್ ರೈಲಿನಂತೆ ಗಂಟೆಗೆ 80 ಕಿ.ಮೀ.ವೇಗದಲ್ಲಿ ಓಡುತ್ತದೆ ಎಂದು ಅಧಿಕಾರಿಗಳು ಈಗ ನಿರ್ಧಾರಕ್ಕೆ ಬಂದಿದ್ದಾರೆ.

ಹೈಸ್ಪೀಡ್ ರೈಲಿನ ಪ್ರಯೋಗಾರ್ಥ ಓಡಾಟವನ್ನು ಮುಂಬೈ, ವಿರಾರ ಮತ್ತು ಡಹಾಣು ನಡುವೆ ನಡೆಸಲಾಗಿತ್ತು. ಆದರೆ ನಡೆಸಲಾದ ಪ್ರಾಯೋಗಿಕ ಓಡಾಟಗಳ ಸಂಖ್ಯೆ ಮತ್ತು ವೇಗದ ಕುರಿತು ಪಶ್ಚಿಮ ರೈಲ್ವೆ, ಮುಂಬೈ ರೈಲ್ವೆ ವಿಕಾಸ ನಿಗಮ ಮತ್ತು ಆರ್‌ಡಿಎಸ್‌ಒ ಪರಸ್ಪರ ವಿರುದ್ಧ ಮಾಹಿತಿಗಳನ್ನು ನೀಡಿವೆ.

 ಈ ಹೈಸ್ಪೀಡ್ ರೈಲು ಇತರ ಲೋಕಲ್ ರೈಲುಗಳಂತೆಯೇ ಕಾಣುತ್ತದೆಯಾದರೂ ಅದರ ಬೋಗಿಗಳು ವಿಭಿನ್ನತೆಯನ್ನು ನೀಡಲಿದ್ದವು. 4,500 ಕೋ.ರೂ.ವೆಚ್ಚದ ಮುಂಬೈ ನಗರ ಸಾರಿಗೆ ಯೋಜನೆಯಡಿ ಈ ಬೋಗಿಗಳ ಚೌಕಟ್ಟುಗಳು ಮತ್ತು ತಂತ್ರಜ್ಞಾನವನ್ನು ಆಸ್ಟ್ರಿಯಾದ ಸೀಮೆನ್ಸ್‌ನಿಂದ ಖರೀದಿಸಲಾಗಿತ್ತು. ಈ ರೈಲು ದೂರದ ಸ್ಥಳಗಳಾದ ಡಹಾಣು, ಕರ್ಜತ್ ಮತ್ತು ಕಸಾರಾಗಳಿಗೆ ಪ್ರಯಾಣದ ಅವಧಿಯನ್ನು ಕನಿಷ್ಠ 20ರಿಂದ 25 ನಿಮಿಷಗಳಷ್ಟು ಕಡಿತಗೊಳಿಸುತ್ತಿತ್ತು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X