ಅಜಯ್ ದೇವಗನ್ ಸಿನೆಮಾ ಮಂದಿರದ ಮೇಲೆ ದಾಳಿ

ಮುಂಬೈ, ಜ. 25: ಉತ್ತರಪ್ರದೇಶದಲ್ಲಿ ಬಾಲಿವುಡ್ ನಟ ಅಜಯ್ ದೇವಗನ್ ಮಾಲಕತ್ವದ ಸಿನೆಮಾ ಮಂದಿರದ ಮೇಲೆ ರಜಪೂತ ಕರ್ಣಿ ಸೇನಾದ ಕಾರ್ಯಕರ್ತರು ದಾಳಿ ನಡೆಸಿದ್ದಾರೆ. ಹಾಪುರ್ ಜಿಲ್ಲೆಯ ಪಿಲ್‌ಖುವಾದಲ್ಲಿರುವ ದೇವಗನ್ ಮಾಲಕತ್ವದ ಸಿನೆಮಾ ಮಂದಿರದಲ್ಲಿ ಪದ್ಮಾವತ್ ಚಲನಚಿತ್ರದ ಪ್ರದರ್ಶನದ ಮುಂಗಡ ಬುಕ್ಕಿಂಗ್ ಆರಂಭಿಸುತ್ತಿದ್ದಂತೆ ರಜಪೂತ್ ಕರ್ಣಿ ಸೇನಾದ ಕಾರ್ಯಕರ್ತರು ಚಲನಚಿತ್ರದ ವಿರುದ್ಧ ಘೋಷಣೆಗಳನ್ನು ಕೂಗಿದರು. ಟಿಕೆಟ್ ನೀಡುವ ಕಿಟಕಿ ಗಾಜುಗಳನ್ನು ಒಡೆದರು. ಈ ಬಗ್ಗೆ ಅಜಯ್ ದೇವಗನ್ ಯಾವುದೇ ಹೇಳಿಕೆ ನೀಡಲು ನಿರಾಕರಿಸಿದ್ದಾರೆ.
Next Story