ಜಾನುವಾರು ಸಾಗಾಟ: ಇಬ್ಬರು ಆರೋಪಿಗಳ ಬಂಧನ
ಉಳ್ಳಾಲ, ಜ. 25: ಮಂಗಳೂರಿನಿಂದ ಕೇರಳ ಕಡೆ ಕೋಣಗಳನ್ನು ಸಾಗಾಟ ಮಾಡುತ್ತಿದ್ದ ಲಾರಿಯನ್ನು ತೊಕ್ಕೊಟ್ಟು ಬಳಿ ವಶಪಡಿಸಿಕೊಂಡ ಉಳ್ಳಾಲ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.
ಕಾಸರಗೋಡು ಜಿಲ್ಲೆಯ ಚೆರ್ಕಳ ಸಮೀಪದ ದಿವಾಕರ ನಾಯರ್(47) ಕೇರಳ ಮೂಲದ ಸ್ವಹಿಬ್ ಹಬೀಬ್ (33) ಬಂಧಿತ ಆರೋಪಿಗಳು.
ಅವರು ಮೂಡಿಗೆರೆಯಿಂದ 20 ಕೋಣಗಳನ್ನು ಲಾರಿಯಲ್ಲಿ ತುಂಬಿಸಿ ಕಸಾಯಿಖಾನೆಗೆಂದು ಕೇರಳ ಕಡೆಗೆ ಸಾಗಾಟ ಮಾಡುತ್ತಿದ್ದರೆನ್ನಲಾಗಿದೆ.
ಖಚಿತ ಮಾಹಿತಿ ಪಡೆದ ಉಳ್ಳಾಲ ಇನ್ಸ್‌ಪೆಕ್ಟರ್ ಗೋಪಿಕೃಷ್ಣ ಮತ್ತು ಎಸ್ ಐ ವಿನಾಯಕ್ ಅವರ ತಂಡ ದಾಳಿ ನಡೆಸಿ,ಲಾರಿಯನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
Next Story





