ಅವಧಿ ಮುಕ್ತಾಯವಾಗುವ ರಾಜ್ಯದ ಗ್ರಾ.ಪಂ.ಗಳಿಗೆ ಚುನಾವಣೆ: ಆಯೋಗ
ಮಂಗಳೂರು, ಜ. 25: 2018ರ ಎಪ್ರಿಲ್, ಮೇ ಮತ್ತು ಜೂನ್ ತಿಂಗಳುಗಳಲ್ಲಿ ಅವಧಿ ಮುಕ್ತಾಯವಾಗುವ ರಾಜ್ಯದ 7 ಗ್ರಾ.ಪಂ.ಗಳ ಎಲ್ಲಾ ಸದಸ್ಯ ಸ್ಥಾನಗಳಿಗೆ ಸಾರ್ವತ್ರಿಕ ಚುನಾವಣೆಗೆ ರಾಜ್ಯ ಚುನಾವಣಾ ಆಯೋಗವು ವೇಳಾಪಟ್ಟಿಯನ್ನು ಘೋಷಿಸಿದೆ.
ಫೆ. 5ರಂದು ಜಿಲ್ಲಾಧಿಕಾರಿಯವರು ಚುನಾವಣಾ ಅಧಿಸೂಚನೆಯನ್ನು ಹೊರಡಿಸಲಿದ್ದಾರೆ. ಫೆ. 8 ನಾಮಪತ್ರ ಸಲ್ಲಿಸಲು ಕೊನೆಯ ದಿನವಾಗಿದ್ದು, 9ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದೆ. ಫೆ. 12ರಂದು ಉಮೇದುವಾರಿಕೆ ಹಿಂದೆಗೆಯಲು ಕೊನೆಯ ದಿನ. 18ರಂದು ಅವಶ್ಯಕತೆ ಇದ್ದರೆ ಮತದಾನ ನಡೆಯಲಿದೆ. 19ರಂದು ಅಗತ್ಯಬಿದ್ದರೆ ಮರುಮತದಾನ, 20ರಂದು ತಾಲೂಕು ಕೇಂದ್ರಗಳಲ್ಲಿ ಬೆಳಗ್ಗೆ 8 ಗಂಟೆಯಿಂದ ಮತ ಎಣಿಕೆ ನಡೆಯಲಿದೆ ಎಂದು ಪ್ರಕಟನೆ ತಿಳಿಸಿದೆ.
Next Story





