ಎಸ್ಕೆಎಸೆಸ್ಸೆಫ್ ಕಾಂಜಿಲಕೊಡಿ ಶಾಖೆಯ ಮಹಾಸಭೆ
ಮಂಗಳೂರು, ಜ.25: ಎಸ್ಕೆಎಸೆಸ್ಸೆಫ್ ಕಾಂಜಿಲಕೊಡಿ ಶಾಖೆಯ ಮಹಾಸಭೆಯು ಕೈಕಂಬ ವಲಯ ಉಪಾಧ್ಯಕ್ಷ ಶರೀಫ್ ಮಳಲಿಯ ಅಧ್ಯಕ್ಷತೆಯಲ್ಲಿ ಕಾಂಜಿಲಕೋಡಿಯ ಬದ್ರುಲ್ ಹುದಾ ಮಸೀದಿಯ ಸಭಾಂಗಣದಲ್ಲಿ ನಡೆಯಿತು.
ಮಸೀದಿಯ ಖತೀಬ್ ಸಭೆ ಉದ್ಘಾಟಿಸಿದರು. ಜಂಇಯತುಲ್ ಮುಅಲ್ಲಿಮಿನ್ ಅಧ್ಯಕ್ಷ ಅಬ್ದುಲ್ ಮಜೀದ್ ದಾರಿಮಿ ಮಾತನಾಡಿದರು. ಮಸೀದಿಯ ಅಧ್ಯಕ್ಷ ಅಹ್ಮದ್ ಬಾವ ದಿಕ್ಸೂಚಿ ಭಾಷಣ ಮಾಡಿದರು. ವೇದಿಕೆಯಲ್ಲಿ ಎಂ.ಎಚ್. ಹಾಜಿ ಅಡ್ಡೂರು, ಕೈಕಂಬ ವಲಯ ಅಧ್ಯಕ್ಷ ಮುಹಮ್ಮದ್ ಕುಂಞಿ ಮಾಸ್ಟರ್, ಕೌನ್ಸಿಲರ್ ಮುಸ್ತಫಾ ಸೈಟ್, ದಾವೂದ್ ಸೈಟ್, ವಲಯ ಕೋಆರ್ಡಿನೇಟರ್ ಅಬ್ದುಲ್ ಸಲಾಂ ಉಪಸ್ಥಿತರಿದ್ದರು. ಶಾಖೆಯ ಅಧ್ಯಕ್ಷ ಹಾರಿಸ್ ಕಳಸಗುರಿ ಸ್ವಾಗತಿಸಿದರು. ಕೈಕಂಬ ವಲಯ ಚುನಾವಣಾಧಿಕಾರಿ ಆರೀಫ್ ಕಮ್ಮಾಜೆಯ ಉಪಸ್ಥಿತಿಯಲ್ಲಿ ನೂತನ ಸಮಿತಿಗೆ ಅಯ್ಕೆ ಮಾಡಲಾಯಿತು.
ಅಧ್ಯಕ್ಷರಾಗಿ ಹಾರಿಸ್ ಕಳಸಗುರಿ, ಉಪಾಧ್ಯಕ್ಷರಾಗಿ ಸಮೀರ್ ನೂಯಿ, ಪ್ರದಾನ ಕಾರ್ಯದರ್ಶಿಯಾಗಿ ಅಬ್ದುಲ್ ಸಲಾಂ, ಜೊತೆ ಕಾರ್ಯದರ್ಶಿಯಾಗಿ ನೌಫಲ್ ಕೊಡಿಬೆಟ್ಟು, ಕೋಶಾದಿಕಾರಿ ಮುಹಮ್ಮದ್ ಶರೀಫ್ ಪೊನ್ನೆಲ, ಉಪಸಮಿತಿ ಉಸ್ತುವಾರಿ ಕಾರ್ಯದರ್ಶಿಯಾಗಿ ಸಹಚಾರಿ ಮುಹಮ್ಮದ್ ಶರೀಫ್ ನೂಯಿ, ಶಾಫಿ ಕಳಸಗುರಿ, ಟ್ರೆಂಡ್ ಅಬ್ದುಲ್ ರಶೀದ್ ಪೊನ್ನೆಲ, ವಿಕಾಯ ಶಾಹುಲ್ ಹಮೀದ್ ನೂಯಿ, ಇಬಾದ್, ಅಬ್ದುಲ್ ಅಝೀಝ್ ಪೊನ್ನೆಲ, ಕ್ಲಷ್ಟರ್ ಕೌನ್ಸಿಲರ್ ಮುಹಮ್ಮದ್ ಕುಂಞಿ ಮಾಸ್ಟರ್, ದಾವೂದ್, ಸಫ್ವಾನ್, ಅಬ್ದುಲ್ ಜಬ್ಬಾರ್ ಆಯ್ಕೆಯಾದರು.







