12 ಮಂದಿ ಅಧಿಕಾರಿಗಳಿಗೆ ‘ಸರ್ವೋತ್ತಮ ಸೇವಾ ಪ್ರಶಸ್ತಿ’
ಬೆಂಗಳೂರು, ಜ.25: ರಾಜ್ಯ ಸರಕಾರವು 2017-18ನೆ ಸಾಲಿನಲ್ಲಿ ವಿವಿಧ ಇಲಾಖೆಗಳಲ್ಲಿ ಅತ್ಯುತ್ತಮ ಸೇವೆಗೈದ, ಸಾಧನೆಗೈದ 12 ಮಂದಿ ಸರಕಾರಿ ಅಧಿಕಾರಿಗಳು ಮತ್ತು ಸಿಬ್ಬಂದಿಗಳಿಗೆ ರಾಜ್ಯಮಟ್ಟದ ‘ಸರ್ವೋತ್ತಮ ಸೇವಾ ಪ್ರಶಸ್ತಿ’ಯನ್ನು ಪ್ರದಾನ ಮಾಡಿ ಗೌರವಿಸಿದೆ. ಪ್ರಶಸ್ತಿಯು ಪ್ರಮಾಣ ಪತ್ರ ಮತ್ತು ತಲಾ 25 ಸಾವಿರ ರೂ.ಗಳ ಪ್ರೋತ್ಸಾಹ ಧನವನ್ನು ಒಳಗೊಂಡಿರುತ್ತದೆ.
ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಸರಕಾರದ ಮುಖ್ಯ ಕಾರ್ಯದರ್ಶಿಯವರ ಆಪ್ತ ಶಾಖೆ(ಸಚಿವ ಸಂಪುಟ)ಯ ಜಮೇದಾರ್- ನರಸಿಂಹಲು, ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ(ಲೆಕ್ಕಪತ್ರ ಶಾಖೆ)ಯ ಶಾಖಾಧಿಕಾರಿ-ಜಿ.ಆರ್.ಸಂದೇಶ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸರಕಾರದ ಅಪರ ಮುಖ್ಯ ಕಾರ್ಯದರ್ಶಿಯವರ ಆಪ್ತ ಶಾಖೆಯ ದಲಾಯತ್-ಸುಭಾಷ್‌ಚಂದ್ರ ರೆಡ್ಡಿ. ಲೋಕೋಪಯೋಗಿ ಇಲಾಖೆಯ ಸರಕಾರದ ಅಪರ ಮುಖ್ಯ ಕಾರ್ಯದರ್ಶಿಯವರ ಆಪ್ತ ಶಾಖೆಯ ಜಮೇದಾರ್-ಡಿ.ಆರ್.ರಾಜು, ಉತ್ತರ ಕನ್ನಡ ಜಿಲ್ಲೆಯ ಶಿರಸಿ ವಿಭಾಗದ ಕೃಷಿ ಇಲಾಖೆಯ ಉಪ ನಿರ್ದೇಶಕ- ಟಿ.ಎಚ್.ನಟರಾಜ, ಬೆಂಗಳೂರಿನ ವಿ.ವಿ.ಗೋಪುರದಲ್ಲಿರುವ ಪಶುಪಾಲನೆ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯ(ಜಾನುವಾರು ಸಂಪನ್ಮೂಲ) ಅಪರ ನಿರ್ದೇಶಕ-ಡಾ.ಎಂ.ಟಿ.ಮಂಜುನಾಥ್.
ಬೆಂಗಳೂರಿನ ಸಾರಿಗೆ ಮತ್ತು ರಸ್ತೆ ಸುರಕ್ಷತೆ ಆಯುಕ್ತರ ಕಚೇರಿಯ ಅಧೀಕ್ಷಕರು ಹಾಗೂ ಸಾರ್ವಜನಿಕ ಸಂಪರ್ಕಾಧಿಕಾರಿ-ಎಸ್.ಪ್ರೇಮಲತಾ, ಬೆಂಗಳೂರಿನ ಧಾರ್ಮಿಕ ದತ್ತಿ ಇಲಾಖೆಯ ಆಯುಕ್ತರ ಕಚೇರಿ(ಸಮೂಹ ‘ಎ’ ಹಿರಿಯ ಶ್ರೇಣಿ)ಯ ಕೇಂದ್ರ ಸ್ಥಾನಿಕ ಸಹಾಯಕ-ಜಯಪ್ರಕಾಶ್, ಮೈಸೂರಿನ ಕಾರ್ಖಾನೆಗಳು, ಬಾಯ್ಲರುಗಳು, ಕೈಗಾರಿಕೆ ಸುರಕ್ಷತೆ ಮತ್ತು ಸ್ವಾಸ್ಥ ಇಲಾಖೆಯ ವಿಭಾಗ-1ರ ಕಾರ್ಖಾನೆಗಳ ಉಪ ನಿರ್ದೇಶಕ-ಡಿ.ಸಿ.ಜಗದೀಶ್.
ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಇಲಾಖೆ(ಅರಣ್ಯ ‘ಡಿ’ಶಾಖೆ)ಯ ಶಾಖಾಧಿಕಾರಿ-ಉಮೇಶ್ ಶಾಸ್ತ್ರಿ, ಬೆಳಗಾವಿ ಜಿಲ್ಲಾ ಪೊಲೀಸ್ ಕಚೇರಿಯ ದ್ವಿತೀಯ ದರ್ಜೆ ಸಹಾಯಕ-ವಿದ್ಯಾರಣ್ಯ ಗುರು ಶಾಂತಯ್ಯಾ ಹಿರೇಮಠ ಹಾಗೂ ಬೀದರ್ ಜಿಲ್ಲೆಯ ಔರಾದ್ ತಾಲೂಕಿನ ಜಂಬಗಿ ಹಾಗೂ ವಡಗಾಂವ ಗ್ರಾಮ ಪಂಚಾಯತ್‌ನ ಪಂಚಾಯತ್ ಅಭಿವೃದ್ಧಿ ಅಧಿಕಾರಿ-ಶರತ್‌ಕುಮಾರ್ ಪ್ರಶಸ್ತಿಗೆ ಭಾಜನರಾಗಿದ್ದಾರೆ ಎಂದು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಸರಕಾರದ ಉಪ ಕಾರ್ಯದರ್ಶಿ ಕೆ.ಪಿ.ಚಂದ್ರಹಾಸ ಪ್ರಕಟನೆಯಲ್ಲಿ ತಿಳಿಸಿದ್ದಾರೆ.







