ಮೇಲಂಗಡಿ: ಮೊಹಬ್ಬತೇ ಜೀಲಾನಿ ಕಾರ್ಯಕ್ರಮ

ಮಂಗಳೂರು, ಜ. 25: ಕರ್ನಾಟಕ ರಾಜ್ಯ ಸುನ್ನೀ ಯುವಜನ ಸಂಘ ಮತ್ತು ಸುನ್ನೀ ಸ್ಟುಡೆಂಟ್ಸ್ ಫೆಡರೇಶನ್ ಮೇಲಂಗಡಿ, ಉಳ್ಳಾಲ ಇದರ ಜಂಟಿ ಆಶ್ರಯದಲ್ಲಿ ಮೊಹಬ್ಬತೇ ಜೀಲಾನಿ ನಸೀಅತ್ ಸಿಲ್‌ಸಿಲಾದ ಪ್ರಯುಕ್ತ ಧಾರ್ಮಿಕ, ಸಾಂಸ್ಕೃತಿಕ ಮತ್ತು ಸಾಮಾಜಿಕ ಕಾರ್ಯಕ್ರಮ ಮೇಲಂಗಡಿ ದರ್ಗಾ ಮುಖ್ಯ ರಸ್ತೆ ಬಳಿಯ ಮರ್ಹೂಂ ಕಬೀರ್ ಮತ್ತು ಮರ್ಹೂಂ ಶಿಹಾಬ್ ಸಭಾಂಗಣದ ತಾಜುಲ್ ಉಲಮಾ ವೇದಿಕೆಯಲ್ಲಿ ಜರುಗಿತು.
ಬೃಹತ್ ಮುರ್ದಾ ಮಜ್ಲಿಸ್, ಮುಹ್ಯದ್ದೀನ್ ಮಾಲೆ ಆಲಾಪಣೆ, ಮದನಿ ಮಾಲೆ ಆಲಾಪನೆ, ತಾಜುಲ್ ಉಲಮಾ ಮೌಲಿದ್ ಮತ್ತು ವಾರ್ಷಿಕ ಜಲಾಲಿಯಾ ರಾತೀಬು ಮಜ್ಲಿಸ್ ಕಾರ್ಯಕ್ರಮವು ಉಳ್ಳಾಲ ಖಾಝಿ ಅಸ್ಸಯ್ಯದ್ ಫಝಲ್ ಕೋಯಮ್ಮ ತಂಙಳ್ ಕೂರತ್ ದುಆದೊಂದಿಗೆ ನಡೆಯಿತು.
ಸಮಾರೋಪ ಸಮಾರಂಭವನ್ನು ಎಸ್.ವೈ.ಎಸ್. ಮೇಲಂಗಡಿ ಬ್ರಾಂಚ್ ಅಧ್ಯಕ್ಷ ಬಶೀರ್ ಸಖಾಫಿ ದುಆ ಮೂಲಕ ಚಾಲನೆ ನೀಡಿದರು. ಎಸ್.ವೈ.ಎಸ್. ಉಳ್ಳಾಲ ಸೆಂಟರ್ ಅಧ್ಯಕ್ಷ ಜಲಾಲುದ್ದೀನ್ ತಂಙಳ್ ಅಧ್ಯಕ್ಷತೆಯಲ್ಲಿ ಅಸ್ಸಯ್ಯದ್ ಮುಷ್ತಾಕುರ್ರಹ್ಮಾನ್ ತಂಙಳ್ ಚಟ್ಟಕ್ಕಲ್ ನೇತೃತ್ವದಲ್ಲಿ ಅಝಾದ್ ನಗರ ಜುಮಾ ಮಸೀದಿ ಖತೀಬ್ ಖಲಂದರ್ ಸಖಾಫಿ ಉದ್ಘಾಟಿಸಿದರು.
ಖ್ಯಾತ ವಿದ್ವಾಂಸ ಅಬ್ದುಲ್ ಖಾದರ್ ಸಖಾಫಿ ಮುದುಗುಡ ಮುಖ್ಯ ಪ್ರಭಾಷಣಗೈದರು. ಈ ಸಂದರ್ಭ ದ.ಕ. ಜಿಲ್ಲಾ ವಕ್ಫ್ ಸಲಹಾ ಸಮಿತಿಯ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಉಳ್ಳಾಲ ದರ್ಗಾದ ಮಾಜಿ ಅಧ್ಯಕ್ಷ ಯು.ಕೆ.ಮೋನು ಕಣಚೂರು, ಸದಸ್ಯ ಅಲ್ತಾಫ್ ಕುಂಪಲರಿಗೆ ಶಾಲು ಹೊದಿಸಿ ಅಭಿನಂದಿಸಲಾಯಿತು.
ದ.ಕ. ಸುನ್ನೀ ಉಲಮಾ ಒಕ್ಕೂಟದ ಪ್ರಧಾನ ಕಾರ್ಯದರ್ಶಿಗಳಾದ ತೋಕೆ ಮುಹಿಯುದ್ದೀನ್ ಕಾಮಿಲ್ ಸಖಾಫಿ, ಖತೀಬರುಗಳಾದ ಪಟ್ಲ ಫೈಝಿ ಉಸ್ತಾದ್, ಹಸನ್ ಮುಬಾರಕ್ ಸಖಾಫಿ ಮಂಚಿಲ, ಯೂನುಸ್ ಇಮ್ದಾದಿ ತೋಟ, ಶರೀಫ್ ಸಅದಿ ಸುಂದರಿಭಾಗ್, ಉಸ್ಮಾನ್ ಜೌಹರಿ ನೆಲ್ಯಾಡಿ, ಉಳ್ಳಾಲ ದರ್ಗಾ ಮಾಜಿ ಅಧ್ಯಕ್ಷರಾದ ಯು.ಎಸ್. ಹಂಝ ಹಾಜಿ, ಸುನ್ನೀ ಮೊಹಲ್ಲಾ ಒಕ್ಕೂಟದ ಅಧ್ಯಕ್ಷರಾದ ಶಿಹಾಬುದ್ದೀನ್ ಸಖಾಫಿ ಅಲ್ ಕಾಮಿಲ್ ಎಸ್.ವೈ.ಎಸ್. ಜಿಲ್ಲಾ ಕೋಶಾಧಿಕಾರಿ ಬಿ.ಜೆ. ಹನೀಫ್ ಹಾಜಿ, ಉಳ್ಳಾಲ ನಗರಸಭಾ ಅಧ್ಯಕ್ಷರಾದ ಹುಸೈನ್ ಕುಂಞಿಮೋನು, ಮುನೀರ್ ಅಹ್ಮದ್ ಕಾಮಿಲ್ ಸಖಾಫಿ, ಅಸ್ಸಯ್ಯದ್ ಖುಬೈಬ್ ತಂಙಳ್, ಇಸ್ಹಾಕ್ ಪೇಟೆ, ಉಳ್ಳಾಲ ನಗರಸಭಾ ಕೌನ್ಸಿಲರ್‌ಗಳಾದ ಯು. ಎ. ಇಸ್ಮಾಯೀಲ್, ಶೌಕತ್ ಮಾಸ್ತಿಕಟ್ಟೆ, ಸ್ಥಳದಾನಿಯಾದ ಕರೀಂ ಹಾಜಿ, ಯು.ಪಿ. ಬಾವಾ, ಉಳ್ಳಾಲ ದರ್ಗಾ ಸಮಿತಿ ಸದಸ್ಯರಾದ ಹಮೀದ್ ಮಂಚಿಲ, ಮಕ್ಸೂದ್ ಮಂಚಿಲ, ಅಝೀರ್ ಕೋಡಿ, ಸಮೀರ್ ಮುಕ್ಕಚ್ಚೇರಿ, ತ್ವಾಹಿರ್ ಹಾಜಿ ಮುಕ್ಕಚ್ಚೇರಿ, ಅಬ್ದುಲ್ ಖಾದರ್ ಕೋಡಿ, ಹನೀಫ್ ಹಾಜಿ ಮಾರ್ಗತಲೆ ಅಗಮಿಸಿದ್ದರು. ಸಮೀರ್ ಸೇವಂತಿಗುಡ್ಡೆ, ಮುಸ್ತಫಾ ಮಾಸ್ಟರ್ ಮುಕ್ಕಚ್ಚೇರಿ, ದ.ಕ. ಜಿಲ್ಲಾ ಕ್ರೀಡಾ ಸಮಿತಿಯ ಸಾಜಿದ್ ಉಳ್ಳಾಲ, ಎಂ.ಸಿ.ಸಿ. ಸದ್ದಾಂ ಮೇಲಂಗಡಿ, ಹಾಫಿರ್ ಮುಈನ್ ರಝ್ವಿ, ಹಾಫಿರ್ ಉವೈಸ್ ಮುಸ್ಲಿಯಾರ್ ಕೊಟೇಪುರ ಉಪಸ್ಥಿತರಿದ್ದರು.
ಕಾರ್ಯಕ್ರಮ ಮೇಲುಸ್ಥುವಾರಿ ಸಮಿತಿ ಸದಸ್ಯರಾದ ಯೂಸುಫ್ ಹಾಜಿ, ಸತ್ತಾರ್ ಸಹ್ಲ ಸೌಂಡ್ಸ್, ಅಕ್ಬರ್, ಝಿಯಾದ್ ಪಟ್ಟಾಂಬಿ, ಝಿಯಾದ್ ಹೊಸ ಕರಿಯ, ಶಫೀಕ್ , ನವಾಝ್, ಇಮ್ರಾನ್, ಇರ್ಫಾನ್, ತಶ್ರೀಫ್, ಇಸ್ಮಾಯೀಲ್ ಮುಹಾರ್, ಫಾಳಿಲ್, ಶಾಕಿರ್ ಕಾರ್ಯಕ್ರಮದ ಯಶಸ್ಸಿಗಾಗಿ ಕಾರ್ಯಪ್ರವೃತರಾಗಿದ್ದರು. ಶಾಖಾಧ್ಯಕ್ಷ ಜಮಾಲುದ್ದೀನ್ ಮುಸ್ಲಿಯಾರ್ ಸ್ವಾಗತಿಸಿ ಬ್ರಾಂಚ್ ಕಾರ್ಯದರ್ಶಿ ಖಾದರ್ ಜೀಲಾನಿ ನಿರೂಪಿಸಿದರು.







