ಕೇರಳ ಸರಕಾರದ ಆದೇಶ ಲೆಕ್ಕಿಸದೇ ಧ್ವಜಾರೋಹಣ ಮಾಡಿದ ಆರ್ಎಸ್ಎಸ್ ಮುಖ್ಯಸ್ಥ ಭಾಗವತ್

ತಿರುವನಂತಪುರ, ಜ.26: ಕೇವಲ ಶಾಲಾ ಮುಖ್ಯಸ್ಥರು ಮಾತ್ರ ಧ್ವಜಾರೋಹಣ ಮಾಡಬೇಕೆಂದು ಕೇರಳ ಸರಕಾರ ಸ್ಪಷ್ಟ ಆದೇಶ ನೀಡಿದ ಹೊರತಾಗಿಯೂ ಕಳೆದ ವರ್ಷದಂತೆ ಈ ವರ್ಷವೂ ಕೇರಳ ಶಾಲೆಯೊಂದರಲ್ಲಿ ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಗಣರಾಜ್ಯೋತ್ಸವದಲ್ಲಿ ಧ್ವಜಾರೋಹಣ ಮಾಡಿದ್ದಾರೆ.
ಜಿಲ್ಲಾಡಳಿತ ಧ್ವಜಾರೋಹಣ ಮಾಡದಂತೆ ನಿರ್ಬಂಧಿಸಿದ ಹೊರತಾಗಿಯೂ ಕಳೆದ ವರ್ಷದಂತೆಯೇ ಪಾಲಕ್ಕಾಡ್ನ ಕಾರ್ನಕಿಯಾಮನ್ ಹೈಯರ್ ಸೆಕೆಂಡರಿ ಸ್ಕೂಲ್ಗೆ ಶುಕ್ರವಾರ ಬೆಳಗ್ಗೆ ತೆರಳಿದ ಭಾಗವತ್ ಧ್ವಜಾರೋಹಣ ಮಾಡಿದ್ದಾರೆ.
ಎಲ್ಲ ಸರಕಾರಿ ಸಂಸ್ಥೆಗಳು ಹಾಗೂ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರು ಮಾತ್ರ ಧ್ವಜಾರೋಹಣವನ್ನು ಮಾಡಬೇಕೆಂದು ಈ ವಾರ ಕೇರಳ ಸರಕಾರ ಸುತ್ತೋಲೆ ಹೊರಡಿಸಿತ್ತು. ಕಳೆದ ವರ್ಷ ಪಾಲಕ್ಕಾಡ್ ಜಿಲ್ಲಾಧಿಕಾರಿಗಳು ಕಾರ್ನಕಿಯಾಮನ್ ಹೈಯರ್ ಸೆಕೆಂಡರಿ ಸ್ಕೂಲ್ಗೆ ನೋಟಿಸ್ ಕಳುಹಿಸಿ ಶಾಲೆಯಲ್ಲಿ ರಾಜಕೀಯ ನಾಯಕರು ರಾಷ್ಟ್ರ ಧ್ವಜಾರೋಹಣ ಮಾಡುವುದು ಸರಿಯಲ್ಲ ಎಂದು ತಿಳಿಸಿತ್ತು.
Next Story