‘ಸಂವಿಧಾನ ರಕ್ಷಿಸಿ’ ಜಾಥಾ: ಮುಂಬೈಯಲ್ಲಿ ವಿಪಕ್ಷ ನಾಯಕರ ಸಭೆ
ಹಾರ್ದಿಕ್ ಪಟೇಲ್, ಶರದ್ ಪವಾರ್, ಉಮರ್ ಅಬ್ದುಲ್ಲಾ ಮತ್ತಿತರರು ಭಾಗಿ

ಮುಂಬೈ , ಜ.26: ‘ಸಂವಿಧಾನ ರಕ್ಷಿಸಿ’ ಜಾಥಾ ಹಿನ್ನೆಲೆಯಲ್ಲಿ ವಿರೋಧ ಪಕ್ಷಗಳ ನಾಯಕರಾದ ಶರದ್ ಪವಾರ್, ಶರದ್ ಯಾದವ್, ಡಿ.ರಾಜಾ, ಹಾರ್ದಿಕ್ ಪಟೇಲ್, ಉಮರ್ ಅಬ್ದುಲ್ಲಾ, ದಿನೇಶ್ ತ್ರಿವೇದಿ ಹಾಗು ಸುಶೀಲ್ ಕುಮಾರ್ ಶಿಂಧೆ ಶುಕ್ರವಾರ ಮುಂಬೈಯಲ್ಲಿ ಭೇಟಿಯಾದರು.
ಮಹಾರಾಷ್ಟ್ರ ಅಸೆಂಬ್ಲಿಯ ವಿಪಕ್ಷಗಳ ಕಚೇರಿಯಲ್ಲಿ ಸಭೆ ನಡೆಯಿತು. ಎನ್ ಸಿಪಿ ನಾಯಕರಾದ ಪ್ರಫುಲ್ ಪಟೇಲ್, ಡಿ.ಪಿ.ತ್ರಿಪಾಠಿ ಹಾಗು ಮಾಜಿ ಸಂಸದ ರಾಮ್ ಜೇಠ್ಮಲಾನಿ ಸಭೆಯಲ್ಲಿ ಭಾಗವಹಿಸಿದ್ದರು.
ಶುಕ್ರವಾರ ಬಿಜೆಪಿಯ ಮಹಾರಾಷ್ಟ್ರ ಘಟಕವೂ ಮುಂಬೈಯಲ್ಲಿ ತಿರಂಗಾ ಯಾತ್ರೆಯನ್ನು ಹಮ್ಮಿಕೊಂಡಿದೆ.
ಸಂವಿಧಾನ ರಕ್ಷಿಸಿ ಜಾಥಾದಂಗವಾಗಿ ಮುಂಬೈಯ ವಿವಿಯ ಸಮೀಪವಿರುವ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆಯ ಹತ್ತಿರ ಒಂದಾಗಲಿರುವ ಸಮಾನಮನಸ್ಕರು ಗೇಟ್ ವೇ ಆಫ್ ಇಂಡಿಯಾದ ಸಮೀಪವಿರುವ ಶಿವಾಜಿ ಪ್ರತಿಮೆಯೆಡೆಗೆ ಜಾಥಾದಲ್ಲಿ ಸಾಗಲಿದ್ದಾರೆ.
Next Story