ಶಿವರಾಜ್ ಕೊಲೆ ಪ್ರಕರಣ: ಮತ್ತಿಬ್ಬರು ಪೊಲೀಸ್ ವಶಕ್ಕೆ

ಮಂಗಳೂರು, ಜ. 26: ಪಣಂಬೂರು ಪೊಲೀಸ್ ಠಾಣೆ ವ್ಯಾಪ್ತಿಯ ತಣ್ಣೀರುಬಾವಿಯಲ್ಲಿ ಇತ್ತೀಚೆಗೆ ನಡೆದ ಶಿವರಾಜ್ ಕರ್ಕೇರಾ ಎಂಬವರ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಮತ್ತಿಬ್ಬರು ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ತಣ್ಣೀರುಬಾವಿ ಕೋರ್ದಬ್ಬು ದೈವಸ್ಥಾನ ಬಳಿಯ ಜೀವನ್ ಪಿರೇರಾ ಯಾನೆ ಜೀವನ್ (36), ಬಾಗಲಕೋಟೆಯ ಪ್ರಸ್ತುತ ಕುದ್ರೋಳಿ ಬೆಂಗ್ರೆ ಗ್ರಾಮದಲ್ಲಿ ವಾಸವಾಗಿರುವ ಸತೀಶ್ ಯಾನೆ ಸಚ್ಚು ಯಾನೆ ಸತೀಸ್ ಗೌಡಪ್ಪ (29) ಪೊಲೀಸರು ವಶಕ್ಕೆಪಡೆದ ಆರೋಪಿಗಳಾಗಿದ್ದಾರೆ.
ಅವರು ಕೊಲೆ ಕೃತ್ಯಕ್ಕೆ ಸಂಚು ರೂಪಿಸಲು ಸಹಕರಿಸಿದ್ದ ಆರೋಪದಲ್ಲಿ ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಮಂಗಳೂರು ಉತ್ತರ ಉಪವಿಭಾಗದ ಸಹಾಯಕ ಪೊಲೀಸ್ ಆಯುಕ್ತ ರಾಜೇಂದ್ರ ಡಿ.ಎಸ್., ಅವರ ನೇತೃತ್ವದಲ್ಲಿ ಮಂಗಳೂರು ಉತ್ತರ ಉಪವಿಭಾಗದ ರೌಡಿ ನಿಗ್ರಹ ದಳದ ಪಣಂಬೂರು ಪೊಲೀಸ್ ಠಾಣಾ ನಿರೀಕ್ಷಕ ರಫೀಕ್ ಕೆ.ಎಂ., ಪಿಎಸ್‌ಐ ಕುಮರೇಶನ್, ಎಎಸ್‌ಐ ಮುಹಮ್ಮದ್, ಸಿಬ್ಬಂದಿಗಳಾದ ಕುಶಲ ಮಣಿಯಾನಿ, ಸತೀಶ್ ಎಂ., ವಿಜಯ ಕಾಂಚನ್, ಇಸಾಕ್, ರಾಜಾ, ಶರಣ್ ಕಾಳಿ, ಜಗದೀಶ್, ಚಂದ್ರಹಾಸ ಆಳ್ವ, ರಾಧಾಕೃಷ್ಣ, ರವಿ ಪತ್ತೆ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.





