ಚಿಕ್ಕಮಗಳೂರು: ಜೀವರಕ್ಷಕ ಹಾಗೂ ಆಶಾ ಕಾರ್ಯಕರ್ತೆಯರಿಗೆ ಪ್ರಶಸ್ತಿ

ಚಿಕ್ಕಮಗಳೂರು, ಜ.26: ಮುಖ್ಯ ಮಂತ್ರಿಗಳ ಸಾಂತ್ವನ ಯೋಜನೆಯಡಿ ರಸ್ತೆ ಅಪಘಾತದಲ್ಲಿ ಸಹಾಯ ಮಾಡಿದ ಪರೋಪಕಾರಿಗಳಿಗೆ ಜೀವರಕ್ಷಕ ಪ್ರಶಸ್ತಿಯನ್ನು ಕಡೂರು ತಾಲ್ಲೂಕಿನ ಪಿಳ್ಳೇನಹಳ್ಳಿ ಗ್ರಾಮದ ಗುರುಪ್ರಸಾದ್ ಹಾಗೂ ಸಖರಾಯಪಟ್ಟಣದ ಸುಮನ್ ರವರಿಗೆ ನೀಡಲಾಯಿತು.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಜನಸಾಮಾನ್ಯರ ಉತ್ತಮ ಆರೋಗ್ಯ ಸೇವೆಯನ್ನು ಒದಗಿಸಿದ ಆಶಾ ಕಾರ್ಯಕರ್ತೆಯರಾದ ಕೆ.ಆರ್.ಪೇಟೆ ಮಂಜುಳ, ಬಳ್ಳಾವರ ನಿರ್ಮಲಾ ಹಾಗೂ ದೇವನೂರಿನ ಗೌರಮ್ಮ, ಆಶಾ ಸುಗಮಕಾರರಾದ ಬೇಗಾರದ ಭಾಗ್ಯಮ್ಮ ಹಾಗೂ ಜೈಪುರದ ಶ್ರೀಮತಿ ಅವರನ್ನು ಸನ್ಮಾನಿಸಲಾಯಿತು.
Next Story





