ಬಾಬೊಸ್-ಮ್ಲಾಡೆನೊವಿಕ್‌ಗೆ ಡಬಲ್ಸ್ ಕಿರೀಟ

ಮೆಲ್ಬೋರ್ನ್, ಜ.26: ಹಂಗೇರಿಯದ ಟಿಮಿಯಾ ಬಾಬೊಸ್ ಹಾಗೂ ಫ್ರಾನ್ಸ್‌ನ ಕ್ರಿಸ್ಟಿನಾ ಮ್ಲಾಡೆನೊವಿಕ್ ಆಸ್ಟ್ರೇಲಿಯನ್ ಓಪನ್‌ನಲ್ಲಿ ಮಹಿಳೆಯರ ಡಬಲ್ಸ್ ಪ್ರಶಸ್ತಿ ಗೆದ್ದುಕೊಂಡಿದ್ದಾರೆ.
ಶುಕ್ರವಾರ ನಡೆದ ಮಹಿಳೆಯರ ಡಬಲ್ಸ್ ಫೈನಲ್‌ನಲ್ಲಿ ಬಾಬೊಸ್-ಮ್ಲಾಡೆನೊವಿಕ್ ಜೋಡಿ ರಶ್ಯದ ಎಕಟೆರಿನಾ ಮಕರೋವಾ ಹಾಗೂ ಎಲೆನಾ ವೆಸ್ನಿನಾರನ್ನು 6-4, 6-3 ನೇರ ಸೆಟ್‌ಗಳಿಂದ ಸೋಲಿಸಿದೆೆ. ಒಲಿಂಪಿಕ್ಸ್ ಚಾಂಪಿಯನ್ ರಶ್ಯದ ಜೋಡಿಗೆ ಗ್ರಾನ್‌ಸ್ಲಾಮ್ ಡಬಲ್ಸ್‌ನಲ್ಲಿ ಕ್ಲೀನ್‌ಸ್ವೀಪ್ ನಿರಾಕರಿಸಿದ ಬಾಬೊಸ್ ಹಾಗೂ ಮ್ಲಾಡೆನೊವಿಕ್ ಚೊಚ್ಚಲ ಗ್ರಾನ್‌ಸ್ಲಾಮ್ ಪ್ರಶಸ್ತಿ ಮುಡಿಗೇರಿಸಿಕೊಂಡರು. ಮ್ಲಾಡೆನೊವಿಕ್ ಎರಡನೇ ಬಾರಿ ಮಹಿಳೆಯರ ಡಬಲ್ಸ್ ಪ್ರಶಸ್ತಿ ಜಯಿಸಿದ್ದಾರೆ. 2016ರಲ್ಲಿ ಸಹ ಆಟಗಾರ್ತಿ ಕರೊಲಿನ್ ಗಾರ್ಸಿಯಾ ಜೊತೆಗೂಡಿ ಫ್ರೆಂಚ್ ಓಪನ್ ಕಿರೀಟ ಧರಿಸಿದ್ದರು.
Next Story





