ಜುಗಾರಿ ದಾಳಿ: ಉಡುಪಿ ಜಿಲ್ಲೆಯಲ್ಲಿ 12 ಮಂದಿ ಬಂಧನ
ಉಡುಪಿ, ಜ.26: ಜಿಲ್ಲೆಯಾದ್ಯಂತ ಮಟ್ಕಾ ಹಾಗೂ ಅಂದರ್ ಬಾಹರ್ ಜುಗಾರಿ ದಂಧೆ ವಿರುದ್ಧ ದಾಳಿಯನ್ನು ಪೊಲೀಸರು ಮುಂದುವರೆಸಿದ್ದು, ಜ.25 ಮತ್ತು 26ರಂದು ಒಟ್ಟು 12 ಮಂದಿಯನ್ನು ಬಂಧಿಸಿದ್ದಾರೆ.
ಮಟ್ಕಾ ಜುಗಾರಿಗೆ ಸಂಬಂಧಿಸಿ ಜ.26ರಂದು ವಡೇರಹೋಬಳಿ ಗ್ರಾಮದ ಬಸ್ರೂರು ಮೂರುಕೈ ಎಂಬಲ್ಲಿ ರಮೇಶ(40) ಎಂಬಾತನನ್ನು ಕುಂದಾಪುರ ಪೊಲೀಸರು ಹಾಗೂ ತಲ್ಲೂರು ಗ್ರಾಮದ ಪ್ರವಾಸಿ ಹೋಟೆಲ್ ಬಳಿ ವಂಡ್ಸೆಯ ಭಾಸ್ಕರ ಪೂಜಾರಿ(52) ಎಂಬಾತನನ್ನು ಉಡುಪಿ ಸೆನ್ ಪೊಲೀಸರು ಬಂಧಿಸಿ ದ್ದಾರೆ.
ಜ.25ರಂದು ಕಾರ್ಕಳ ತಾಲೂಕಿನ ಮೂಡಾರು ಗ್ರಾಮದ ಬಜಗೋಳಿ ಎಂಬಲ್ಲಿ ಎಸ್.ಕೆ.ಮುಹಮ್ಮದ್(55) ಮತ್ತು ಮೂಡಾರು ಗ್ರಾಮದ ಬಜ ಗೋಳಿ ಬಸ್ ನಿಲ್ದಾಣದ ಬಳಿ ಬಜರ್ಕಳದ ಪದ್ಮ ಪ್ರಸಾದ್(42) ಎಂಬವರನ್ನು ಒಟ್ಟು 6335ರೂ. ನಗದು ಸಹಿತ ಉಡುಪಿ ಸೆನ್ ಪೊಲೀಸರು, ಕಟಪಾಡಿ ಪಳ್ಳಿಗುಡ್ಡೆ ರಸ್ತೆಯಲ್ಲಿ ನೀಲಾವರ ಗ್ರಾಮದ ರತ್ನಾಕರ ಶೆಟ್ಟಿ(46) ಎಂಬಾತನ್ನು ಕಾಪು ಪೊಲೀಸರು ಬಂಧಿಸಿದರು.
ಬೈಂದೂರು ಪೊಲೀಸ್ ಠಾಣಾ ವ್ಯಾಪ್ತಿಯ ಶಿರೂರು ಗ್ರಾಮದ ಸರ್ಪನ ಮನೆ ಎಂಬಲ್ಲಿ ಜ.25ರಂದು ಸಂಜೆ ವೇಳೆ ಅಂದರ್‌ಬಾಹರ್ ಆಡುತ್ತಿದ್ದ ಭಟ್ಕಳದ ಮಂಜಯ್ಯ(48), ಕೃಷ್ಣ ಸುಬ್ರಾಯ ನಾಯ್ಕ (43), ಶೇಖರ ನಾಗಪ್ಪ ನಾಯ್ಕ(40), ಮಂಜುನಾಥ ಸೋಮಯ್ಯ(45), ದುರ್ಗಪ್ಪನಾಗಪ್ಪನಾಯ್ಕ (50), ಶಿರೂರಿನ ಸಯ್ಯದ್ ಸಲೀಮ್(34), ಅಂಬರೀಷ್ ದೇವಾಡಿಗ(30) ಎಂಬವರನ್ನು ಬಂಧಿಸಿ ಡಿಸಿಐಬಿ ಪೊಲೀಸರು 8500ರೂ. ನಗದು ವಶಪಡಿಸಿ ಕೊಂಡಿದ್ದಾರೆ.





