ಕರ್ಕುಂಜೆ: ಅಯ್ಯಪ್ಪ ಗುಡಿಯಲ್ಲಿ ಕಳ್ಳತನ
ಕುಂದಾಪುರ, ಜ.27: ಕರ್ಕುಂಜೆ ಗ್ರಾಮದ ನೇರಳಕಟ್ಟೆಯ ಮುಕ್ಕೂಡು ಎಂಬಲ್ಲಿರುವ ಅಯ್ಯಪ್ಪನ ಗುಡಿಗೆ ಜ. 25ರಂದು ರಾತ್ರಿ ವೇಳೆ ನುಗ್ಗಿದ ಕಳ್ಳರು ಸಾವಿರಾರು ರೂ. ಮೌಲ್ಯದ ಸೊತ್ತುಗಳನ್ನು ಕಳವು ಮಾಡಿರುವ ಬಗ್ಗೆ ವರದಿ ಯಾಗಿದೆ.
ಗುಡಿಗೆ ನುಗ್ಗಿದ ಕಳ್ಳರು 2 ಬೆಳ್ಳಿಯ ಮಾಲೆ ಹಾಗೂ 2 ಬೆಳ್ಳಿಯ ಕಾಲುದೀಪಗಳನ್ನು ಕಳವು ಮಾಡಿದ್ದು, ಇವುಗಳ ಮೌಲ್ಯ 24,500 ರೂ. ಎಂದು ಅಂದಾಜಿಸಲಾಗಿದೆ. ಈ ಬಗ್ಗೆ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





