ಕಾರು ಢಿಕ್ಕಿ: ವಾಕಿಂಗ್ ಹೊರಟ್ಟಿದ್ದ ಇಬ್ಬರು ಮೃತ್ಯು

ತೃಶೂರ್(ಕೇರಳ), ಜ. 27: ಎಡಮುಟ್ಟತ್ತ್ ಬೆಳಗ್ಗಿನ ವಾಕಿಂಗ್ ಹೊರಟಿದ್ದಾಗ ಕಾರು ಢಿಕ್ಕಿಯಾಗಿ ಇಬ್ಬರು ಮೃತಪಟ್ಟಿದ್ದಾರೆ. ಎಡಮುಟ್ಟಂ ಆಲಪೆಟ್ಟಿಯ ನಿವಾಸಿಗಳಾದ ಕೊಡುಂಗುಕಾರನ್ ಹಂಝ(70), ವೀರಕುಂಞ್ (70) ಮೃತಪಟ್ಟ ದುರ್ದೈವಿಗಳು.
ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪಘಾತ ನಡೆದಿದೆ. ಕರ್ನಾಟಕದಿಂದ ಬರುತ್ತಿದ್ದ ಕಲಾವಿದರನ್ನೊಳಗೊಂಡ ವಾಹನವೊಂದು ಢಿಕ್ಕಿಹೊಡೆದಿದೆ. ಇಬ್ಬರೂ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ವಾಹನವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
Next Story