ಮಲ್ಪೆ ಪೊಲೀಸ್ ಠಾಣೆಯಲ್ಲಿ ತೆರದ ಮನೆ ಕಾರ್ಯಕ್ರಮ

ಉಡುಪಿ, ಜ.27: ಕಲ್ಯಾಣಪುರ ಮಿಲಾಗ್ರಿಸ್ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾಟಕದ ವತಿಯಿಂದ ಎನ್‌ಎಸ್‌ಎಸ್ ಸ್ವಯಂ ಸೇವಕರಿಗೆ ತೆರೆದ ಮನೆ ಕಾರ್ಯಕ್ರಮವನ್ನು ಮಲ್ಪೆಪೊಲೀಸ್ ಠಾಣೆಯಲ್ಲಿ ಹಮ್ಮಿ ಕೊಳ್ಳಲಾಗಿತ್ತು.
ಮಲ್ಪೆ ಠಾಣಾಧಿಕಾರಿ ಮಧು ಠಾಣೆಯಲ್ಲಿ ಪೊಲೀಸರು ಕರ್ತವ್ಯ ನಿರ್ವಹಿ ಸುವ ರೀತಿ, ಪೊಲೀಸ್ ಮತ್ತು ಪ್ರಜೆಗಳ ನಡುವೆ ಉತ್ತಮ ಬಾಂಧವ್ಯ, ಬಂದೂಕಗಳ ಬಳಕೆಯ, ಪೊಲೀಸ್ ಕಾರ್ಯದಲ್ಲಿ ವಿವಿಧ ಸ್ತರಗಳು, ಅಪರಾಧಿ ಗಳನ್ನು ವಿಚಾರಿಸುವ ಪರಿ, ಠಾಣೆಯ ಸ್ಥೂಲ ಪರಿಚಯವನ್ನು ವಿವರಿಸಿದರು. ಸಹಾಯಕ ಪೊಲೀಸ್ ಉಪನಿರೀಕ್ಷಕ ವಾಸಪ್ಪ ನಾಯ್ಕೆ ವಿದ್ಯಾರ್ಥಿಗಳು ಪಾಲಿಸಬೇಕಾದ ವಿವಿಧ ಕಾನೂನುಗಳ ಕುರಿತು ಮಾಹಿತಿ ನೀಡಿದರು. ಎನ್ನೆಸ್ಸೆಸ್ ಘಟಕದ ಅಧಿಕಾರಿಗಳಾದ ರವಿನಂದನ್, ಅನುಪಮಾ ಮೊದಲಾದವರು ಉಪಸ್ಥಿತರಿದ್ದರು.
Next Story





