ಅನಾಥ ಮಕ್ಕಳೊಂದಿಗೆ ಗಣರಾಜ್ಯೋತ್ಸವ ಆಚರಣೆ

ಬೆಂಗಳೂರು, ಜ.27: ಆಲ್ ಇಂಡಿಯಾ ಕ್ರಿಶ್ಚಿಯನ್ ಡೆಮಾಕ್ರೆಟಿಕ್ ಫ್ರಂಟ್‌ನಿಂದ ಅನಾಥ ಮಕ್ಕಳು, ಅವಕಾಶ ವಂಚಿತರು, ಹಿರಿಯ ನಾಗರಿಕರೊಂದಿಗೆ ನಗರದ ನೃಪತುಂಗ ರಸ್ತೆಯ ವಿಶ್ರಾಂತಿ ನಿಲಯದಲ್ಲಿ ಹೊಸ ವರ್ಷಾಚರಣೆ ಮತ್ತು ಗಣರಾಜ್ಯೋತ್ಸವ ಆಚರಿಸಲಾಯಿತು.
ಎಲ್ಲ ಜಾತಿ, ಜನಾಂಗ, ಧರ್ಮದ ಬಡಮಕ್ಕಳಿಗೆ ಪುಸ್ತಕ ಮತ್ತಿತರ ಪರಿಕರಗಳು, ಹಿರಿಯ ನಾಗರಿಕರಿಗೆ ಹೊದಿಕೆ ಮತ್ತಿತರ ವಸ್ತುಗಳನ್ನು ವಿತರಿಸಲಾಯಿತು. ಸಮಾರಂಭದಲ್ಲಿ ಮಾತನಾಡಿದ ಆಲ್ ಇಂಡಿಯಾ ಡೆಮಾಕ್ರಟಿಕ್ ಫ್ರಂಟ್ ಅಧ್ಯಕ್ಷ ಸ್ಯಾಮ್ಯುಯಲ್ ಚಾಕೋ, ಸಮಾಜದ ಕಟ್ಟಕಡೆಯ ವ್ಯಕ್ತಿಯೂ ಮುಖ್ಯವಾಹಿನಿಗೆ ಬರಬೇಕು. ಸಾಮಾಜಿಕ ಮತ್ತು ಆರ್ಥಿಕವಾಗಿ ಪ್ರಗತಿ ಸಾಧಿಸಬೇಕು ಎಂದರು.
ಸಮಾರಂಭದಲ್ಲಿ ಚರ್ಚ್‌ಗಳ ಫಾದರ್‌ಗಳು, ಪ್ರಗತಿಪರ ಚಿಂತಕರು ಮತ್ತಿತರ ಗಣ್ಯರು ಉಪಸ್ಥಿತರಿದ್ದರು.
Next Story





