ಎಐಎಡಿಎಂಕೆ: 140ಕ್ಕೂ ಅಧಿಕ ಪದಾಧಿಕಾರಿಗಳ ಉಚ್ಚಾಟನೆ

ಚೆನ್ನೈ, ಜ. 27: ಪಕ್ಷಕ್ಕೆ ಅಪಖ್ಯಾತಿ ತಂದ ಹಿನ್ನೆಲೆಯಲ್ಲಿ ಪಕ್ಷದ ಟ್ಯುಟಿಕೋರಿನ್ ಜಿಲ್ಲೆಗೆ ಸೇರಿದ 140 ಪದಾಧಿಕಾರಿಗಳನ್ನು ಎಐಎಡಿಎಂಕೆ ನಾಯಕರಾದ ಒ. ಪನ್ನೀರ್‌ಸೆಲ್ವಂ ಹಾಗೂ ಕೆ. ಪಳನಿಸ್ವಾಮಿ ಉಚ್ಛಾಟಿಸಿದ್ದಾರೆ.
ಎಐಡಿಎಂಕೆಯ ಜಿಲ್ಲೆಯ ವಿವಿಧ ಸಂಘಟನಾ ಘಟಕಕ್ಕೆ ಸೇರಿದ 144 ಪದಾಧಿಕಾರಿಗಳನ್ನು ಉಚ್ಛಾಟಿಸಿರುವುದಾಗಿ ಇಬ್ಬರು ನಾಯಕರು ಜಂಟಿ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಪಕ್ಷದ ಸಿದ್ಧಾಂತಕ್ಕೆ ವಿರುದ್ಧವಾಗಿ ವರ್ತಿಸಿದ ಹಾಗೂ ಪಕ್ಷಕ್ಕೆ ಅಪಖ್ಯಾತಿ ತಂದ ಹಿನ್ನೆಲೆಯಲ್ಲಿ ಈ ಪದಾಧಿಕಾರಿಗಳನ್ನು ಎಐಎಡಿಎಂಕೆಯಿಂದ ವಜಾಗೊಳಿಸಲಾಗಿದೆ ಎಂದು ಎಐಎಡಿಎಂಕೆ ಸಂಚಾಲಕ ಪನ್ನೀರ್‌ಸೆಲ್ವಂ ಹಾಗೂ ಸಹ ಸಂಚಾಲಕ ಪಳನಿಸ್ವಾಮಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.
Next Story