ಮಣಿಪಾಲ: 125 ಅಡಿ ಎತ್ತರದಲ್ಲಿ ಹಾರಿದ ತ್ರಿವರ್ಣ ಧ್ವಜ

ಮಣಿಪಾಲ, ಜ.27: ಮಣಿಪಾಲ ಅಕಾಡಮಿ ಆಫ್ ಹೈಯರ್ ಎಜುಕೇಶನ್ (ಮಾಹೆ) ವತಿಯಿಂದ 69ನೆ ಗಣರಾಜ್ಯೋತ್ಸವದ ಅಂಗವಾಗಿ 125 ಅಡಿ ಎತ್ತರದಲ್ಲಿ ತ್ರಿವರ್ಣ ಧ್ವಜದ ಧ್ವಜಾರೋಹಣ ನಡೆಯಿತು.
ಮಾಹೆಯ ಪ್ರೊಚಾನ್ಸಲರ್ ಡಾ.ಎಚ್.ಎಸ್.ಬಲ್ಲಾಳ್ ಅವರು ಮಾಹೆಯ ಪ್ರಧಾನ ಆಡಳಿತ ಕಚೇರಿಯ ಮುಂದೆ ನಿರ್ಮಿಸಲಾದ 125 ಅಡಿ ಎತ್ತರದ ಧ್ವಜ ಸ್ತಂಭದಲ್ಲಿ ಧ್ವಜಾರೋಹಣ ನೆರವೇರಿಸಿದರು. ಇದು ವರ್ಷದ 365 ದಿನಗಳ ಕಾಲವೂ ದಿನದ 24 ಗಂಟೆ ಅಲ್ಲಿ ರಾರಾಜಿಸಲಿದೆ ಎಂದು ಮಾಹೆ ಪ್ರಕಟಣೆ ತಿಳಿಸಿದೆ.
ಕೆಎಂಸಿ ಮಣಿಪಾಲದ ಡೀನ್ ಡಾ. ಪ್ರಗ್ನಾ ರಾವ್ ಸ್ವಾಗತಿಸಿದರೆ, ಮಾಹೆಯ ಕುಲಪತಿ ಡಾ. ವಿನೋದ್ ಭಟ್ ಗಣರಾಜ್ಯೋತ್ಸವ ಸಂದೇಶ ನೀಡಿದರು. ಡಾ. ಬಲ್ಲಾಳ್ ಪಥಸಂಚಲನದಲ್ಲಿ ಗೌರವ ರಕ್ಷೆ ಸ್ವೀಕರಿಸಿದರು.
Next Story





