ಉಡುಪಿ: ವಿಶ್ವನಾಥ್ ಶೆಣೈ ದಂಪತಿಗೆ ‘ಸೇವಾಭೂಷಣ ಪ್ರಶಸ್ತಿ’ ಪ್ರದಾನ

ಉಡುಪಿ, ಜ.27: ಉಡುಪಿ ಯಕ್ಷಗಾನ ಕಲಾರಂಗದ ವತಿಯಿಂದ ಸಂಸ್ಥೆಯ ಕೋಶಾಧಿಕಾರಿ ಸೇವೆ ಸಲ್ಲಿಸಿದ್ದ ಗೋಪಾಲ ಕೃಷ್ಣ ಅವರ ಸ್ಮರಣೆಯಲ್ಲಿ ಸಮಾಜ ಸೇವಕ ಯು.ವಿಶ್ವನಾಥ್ ಶೆಣೈ ಹಾಗೂ ಪ್ರಭಾವತಿ ವಿ.ಶೆಣೈ ದಂಪತಿಗೆ ‘ಸೇವಾ ಭೂಷಣ’ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು.
ಉಡುಪಿ ಪೇಜಾವರ ಮಠದ ರಾಮ ವಿಠಲ ಸಭಾಭವನದಲ್ಲಿ ನಡೆದ ಸಮಾರಂಭದಲ್ಲಿ ಪೇಜಾವರ ಕಿರಿಯ ಯತಿ ಶ್ರೀವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಪ್ರಶಸ್ತಿ ಪ್ರದಾನ ಮಾಡಿದರು. ಗುಜ್ಜಾಡಿ ಪ್ರಭಾಕರ ನಾಯಕ್ ಅಭಿನಂದನಾ ಭಾಷಣ ಮಾಡಿದರು.
ಕಲಾರಂಗದ ಜತೆ ಕಾರ್ಯದರ್ಶಿ ನಾರಾಯಣ ಎಂ.ಹೆಗಡೆ ಸಂಸ್ಮರಣೆ ಮಾಡಿದರು. ಉಪಾಧ್ಯಕ್ಷ ಗಂಗಾಧರ ರಾವ್ ಸ್ವಾಗತಿಸಿದರು. ಕಾರ್ಯದರ್ಶಿ ಮುರಳಿ ಕೆಕಾರ್ ಕಾರ್ಯಕ್ರಮ ನಿರೂಪಿಸಿದರು.
Next Story





