ಅಮೆರಿಕ ದಾಳಿಯಲ್ಲಿ 10 ಇರಾಕ್ ಭದ್ರತಾ ಸಿಬ್ಬಂದಿ ಸಾವು
ಬಗ್ದಾದ್, ಜ. 27: ಇಸ್ಲಾಮಿಕ್ ಸ್ಟೇಟ್ ವಿರುದ್ಧ ಹೋರಾಡುತ್ತಿರುವ ಅಮೆರಿಕ ನೇತೃತ್ವದ ಮಿತ್ರಪಡೆ ನಡೆಸಿದ ವಾಯು ದಾಳಿಯಲ್ಲಿ ಇರಾಕ್ ಭದ್ರತಾ ಪಡೆಯ 10 ಸೈನಿಕರು ಮೃತಪಟ್ಟಿದ್ದಾರೆ ಎಂದು ಇರಾಕ್ ಅಧಿಕಾರಿಗಳು ಹೇಳಿದ್ದಾರೆ.
ಬಗ್ದಾದ್‌ನಿಂದ 170 ಕಿ.ಮೀ. ದೂರದಲ್ಲಿರುವ ಅಲ್-ಬಗ್ದಾರಿ ಎಂಬ ಪಟ್ಟಣದಲ್ಲಿನ ಸ್ಥಳೀಯ ಪೊಲೀಸ್ ಪಡೆಯನ್ನು ಭಯೋತ್ಪಾದಕರು ಎಂಬುದಾಗಿ ತಪ್ಪಾಗಿ ಗ್ರಹಿಸಿದ ಇರಾಕಿ ಪಡೆಗಳು, ವಾಯು ದಾಳಿ ನಡೆಸುವಂತೆ ಸೂಚನೆ ನೀಡಿದ್ದವು.
ಇರಾಕ್ ಸೇನಾ ಘಟಕಕ್ಕೆ ಮಾಹಿತಿ ನೀಡದೆ ಸ್ಥಳೀಯ ಪೊಲೀಸರು ಅಲ್ಲಿಗೆ ಬಂದಿದ್ದರು ಎಂದು ಇರಾಕ್ ಸೇನೆಯ ವಕ್ತಾರರೊಬ್ಬರು ಹೇಳಿಕೆಯೊಂದರಲ್ಲಿ ತಿಳಿಸಿದ್ದಾರೆ.
Next Story





