ಜ.28: ಸಾರ್ವಜನಿಕ ಕಾರ್ಯಕ್ರಮ
ಮಂಗಳೂರು, ಜ.27: ಜಮಾಅತೆ ಇಸ್ಲಾಮೀ ಹಿಂದ್ ಉಳ್ಳಾಲ ಶಾಖೆಯ ತಲಪಾಡಿ ವರ್ತುಲ ವತಿಯಿಂದ ಸಂತುಲಿತ ಚಿಂತನೆ ಸ್ವಸ್ಥ ಸಮಾಜ ಅಭಿಯಾನ ಪ್ರಯುಕ್ತ ಸಾರ್ವಜನಿಕ ಕಾರ್ಯಕ್ರಮವು ಜ.28ರಂದು ಸಂಜೆ 5ಕ್ಕೆ ತಲಪಾಡಿಯ ನಜಾತ್ ಕಾಂಪ್ಲೆಕ್ಸ್ ಬಳಿ ನಡೆಯಲಿದೆ.
ಬೆಂಗ್ರೆಯ ಅನಸ್ ಬಿನ್ ಮಾಲಿಕ್ ಜುಮಾ ಮಸೀದಿ ಖತೀಬ್ ಸಾಜಿದ್ ಮೌಲವಿ ಪರಪ್ಪೂರ್, ಸನ್ಮಾರ್ಗ ಪಬ್ಲಿಕೇಶನ್ ಟ್ರಸ್ಟ್ ಅಧ್ಯಕ್ಷ ಸಈದ್ ಇಸ್ಮಾಯೀಲ್, ಮಂಗಳೂರಿನ ಕರಾವಳಿ ಕಾಲೇಜ್ ಆಫ್ ಫಾರ್ಮಸಿಯ ಪ್ರೊ. ಡಾ.ಮುಹಮ್ಮದ್ ಮುಬೀನ್ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.
Next Story





