ಜೈನ ಭಕ್ತಾದಿಗಳಿಗೆ ಜಾಗೃತಿ ಕಾರ್ಯಕ್ರಮ: ಡಾ. ಆರತಿ ಕೃಷ್ಣ

ಹಾಸನ ಜ.27: ಅನಿವಾಸಿ ಭಾರತೀಯ ಸಮಿತಿ ಉಪಾಧ್ಯಕ್ಷರಾದ ಡಾ. ಆರತಿ ಕೃಷ್ಣ ಅವರ ನೇತೃತ್ವದಲ್ಲಿ ಅನಿವಾಸಿ ಜೈನ ಭಕ್ತಾದಿಗಳಿಗೆ ರಾಜ್ಯ ಸರ್ಕಾರವು ಹೊಸದಾಗಿ ರೂಪಿಸಿರುವ ಅನಿವಾಸಿ ಭಾರತೀಯ ನೀತಿಯ ಕುರಿತು ಪೂರ್ವ ತಯಾರಿ ವಿಕ್ಷಣಾ ಸಭೆ ಶ್ರವಣಬೆಳಗೊಳದಲ್ಲಿಂದು ನಡೆಯಿತು.
ಫೆ. 17 ರಿಂದ ಆರಂಭವಾಗಲಿರುವ ಶ್ರವಣಬೆಳಗೊಳದ ಮಹಾಮಸ್ತಕಾಭಿಷೇಕ ಕಾರ್ಯಕ್ರಮದ ಅಂಗವಾಗಿ ಫೆ.21 ಮತ್ತು ಫೆ.22 ಎರಡು ದಿನಗಳ ಕಾಲ ಅನಿವಾಸಿ ಜೈನ ಭಕ್ತಾದಿಗಳಿಗಾಗಿ ಧಾರ್ಮಿಕ ಕಾರ್ಯಕ್ರಮಗಳು ನೆಡೆಯಲ್ಲಿದೆ ಎಂದು ಡಾ. ಆರತಿ ಕೃಷ್ಣ ಅವರು ಹೇಳಿದರು.
ಮಹಾಮಸ್ತಕಾಭಿಷೇಕ ವಿಶೇಷ ಅಧಿಕಾರಿಗಳಾದ ವರಪ್ರಸಾಧ್ ರೆಡ್ಡಿ, ಸಹ ಸಂಯೋಜಕರಾದ ಚಂದ್ರಕಾಂತ್ ಪಾಟೀಲ್, ಕಾರ್ಯದಶಿಗಳಾದ ವಿನೋದ್ ದೊಡ್ಡಣ್ಣನವರ್, ಉಪಾಧ್ಯಕ್ಷರ ಆಪ್ತ ಕಾರ್ಯದರ್ಶಿ ಲೋಹಿತ್ ಡಿ ಉಪಸ್ಥಿತರಿದ್ದರು.
Next Story





