ಜಪಾನ್ ವಿರುದ್ಧ ಭಾರತಕ್ಕೆ ಜಯ
ಚತುರ್ರಾಷ್ಟ್ರ ಆಹ್ವಾನಿತ ಹಾಕಿ ಟೂರ್ನಿ

ಹ್ಯಾಮಿಲ್ಟನ್, ಜ.27: ಜಪಾನ್ ತಂಡವನ್ನು 4-2 ಅಂತರದಿಂದ ಮಣಿಸಿರುವ ಭಾರತದ ಪುರುಷರ ಹಾಕಿ ತಂಡ ಎರಡನೇ ಹಂತದ ಚತುರ್ರಾಷ್ಟ್ರ ಆಹ್ವಾನಿತ ಹಾಕಿ ಟೂರ್ನಿಯಲ್ಲಿ ಅಜೇಯ ಗೆಲುವಿನ ಓಟ ಮುಂದುವರಿಸಿದೆ.
ನ್ಯೂಝಿಲೆಂಡ್(3-2) ಹಾಗೂ ಬೆಲ್ಜಿಯಂ(5-4) ವಿರುದ್ಧ ರೋಚಕ ಜಯ ಸಾಧಿಸಿರುವ ಭಾರತ ತಂಡ ಜಪಾನ್ ತಂಡದ ಸವಾಲನ್ನು ಹಿಮ್ಮೆಟ್ಟಿಸಿ ಮನ್‌ದೀಪ್ ಸಿಂಗ್(58ನೇ ನಿಮಿಷ) ಹಾಗೂ ರಮನ್‌ದೀಪ್ ಸಿಂಗ್(59ನೇ ನಿ.) ಕೊನೆಯ ಕ್ಷಣದಲ್ಲಿ ದಾಖಲಿಸಿದ ಗೋಲು ನೆರವಿನಿಂದ ಜಯಭೇರಿ ಬಾರಿಸಿತು.
ಭಾರತದ ಪರ ವಿವೇಕ್ ಸಾಗರ್ ಪ್ರಸಾದ್(12ನೇ ನಿ.) ಹಾಗೂ ವರುಣ್ ಕುಮಾರ್(30ನೇ ನಿ.) ಉಳಿದೆರಡು ಗೋಲು ಬಾರಿಸಿದರು. ಜಪಾನ್‌ನ ಪರ ಸೆರೆನ್ ಟನಕ(14ನೇ ನಿ.) ಹಾಗೂ ಶೊಟಾ ಯಮಡ(43ನೇ ನಿ.)ತಲಾ ಒಂದು ಗೋಲು ಬಾರಿಸಿದರು.
ಭಾರತ ರವಿವಾರ ನಡೆಯಲಿರುವ ಫೈನಲ್ ಪಂದ್ಯದಲ್ಲಿ ವಿಶ್ವದ ನಂ.3ನೇ ತಂಡ ಬೆಲ್ಜಿಯಂನ್ನು ಎದುರಿಸಲಿದೆ. ಬೆಲ್ಜಿಯಂ ತಂಡ ಮತ್ತೊಂದು ಪಂದ್ಯದಲ್ಲಿ ಆತಿಥೇಯ ನ್ಯೂಝಿಲೆಂಡ್‌ನ್ನು 4-0 ಅಂತರದಿಂದ ಮಣಿಸಿದೆ.
Next Story





