ಮಂಗಳೂರು: 'ಟ್ಯಾಲೆಂಟ್' ಮಹಿಳಾ ಸಂಘಟನೆಗಳಿಂದ ಸ್ವಚ್ಛತಾ ಕಾರ್ಯಕ್ರಮ

ಮಂಗಳೂರು, ಜ. 28: ಟ್ಯಾಲೆಂಟ್ ರಿಸರ್ಚ್ ಫೌಂಡೇಶನ್‌ನ ಅಂಗ ಸಂಸ್ಥೆಯಾಗಿರುವ ಆಸರೆ ವುಮನ್ಸ್ ಫೌಂಡೇಶನ್ ಮತ್ತು ಟ್ಯಾಲೆಂಟ್ ಮಹಿಳಾ ಗ್ರಾಜುವೇಟ್ ಅಸೋಸಿಯೇಶನ್ ವತಿಯಿಂದ ನಗರದ ಕಂಕನಾಡಿ ಸರ್ವಿಸ್ ಬಸ್ ನಿಲ್ದಾಣ ಮತ್ತು ಕಂಕನಾಡಿ ಮಾರ್ಕೆಟ್ ಆಸುಪಾಸಿನಲ್ಲಿ ರವಿವಾರ ಸ್ವಚ್ಛತಾ ಕಾರ್ಯಕ್ರಮ ನಡೆಯಿತು.
ಸಂಘಟನೆಗಳ ಸುಮಾರು 25 ಮಂದಿ ಕಾರ್ಯಕರ್ತೆಯರು ಬೆಳಗ್ಗೆ 8 ಗಂಟೆಯಿಂದ ಸ್ವಚ್ಛತಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಸ್ವಚ್ಛತಾ ಕಾರ್ಯಕ್ರಮದಲ್ಲಿ ಆಸರೆಯ ಗೌರವಾಧ್ಯಕ್ಷೆ ಶಬೀನಾ ಅಖ್ತರ್, ಅಧ್ಯಕ್ಷೆ ಸಲ್ಮಾ ಉಮರ್, ಉಪಾಧ್ಯಕ್ಷೆ ಆತಿಕಾ ರಫೀಕ್, ಪ್ರಧಾನ ಕಾರ್ಯದರ್ಶಿ ಮುಮ್ತಾಝ್ ಪಕ್ಕಲಡ್ಕ, ಟ್ಯಾಲೆಂಟ್ ಮಹಿಳಾ ಗ್ರಾಜುವೇಟ್ ಅಸೋಸಿಯೇಶನ್‌ನ ಅಧ್ಯಕ್ಷೆ ಸುಹಾನಾ ಕೆ.ಸಿ.ರೋಡ್, ಅಫ್ರಿನಾ, ಮುನೀಝಾ, ತೌಹಿದಾ ಮತ್ತಿತರ ಸದಸ್ಯೆಯರು ಪಾಲ್ಗೊಂಡಿದ್ದರು.
Next Story





