ಉತ್ತರ ಪ್ರದೇಶ: ಲಂಚ ಪಡೆಯುವುದನ್ನು ತಡೆದ ಐಪಿಎಸ್ ಅಧಿಕಾರಿಗೆ ಹಲ್ಲೆ ನಡೆಸಿದ ಪೊಲೀಸರು!
ಆರಕ್ಷಕರೇ ಹೀಗಾದರೆ...?

ಉತ್ತರ ಪ್ರದೇಶ, ಜ.28: ಮರಳು ಸಾಗಾಟದ ಲಾರಿಗಳಿಂದ ಲಂಚ ಪಡೆಯುವುದನ್ನು ವಿರೋಧಿಸಿದ್ದಕ್ಕೆ ಐಪಿಎಸ್ ಅಧಿಕಾರಿಯೊಬ್ಬರ ಮೇಲೆ ಇತರ ಪೊಲೀಸರು ಹಲ್ಲೆ ನಡೆಸಿರುವ ಘಟನೆ ಉತ್ತರ ಪ್ರದೇಶದ ಬಾಂದಾ ಜಿಲ್ಲೆಯಲ್ಲಿ ನಡೆದಿದೆ.
ಘಟನೆಗೆ ಸಂಬಂಧಿಸಿ ಇಬ್ಬರು ಪೊಲೀಸರನ್ನು ಅಮಾನತುಗೊಳಿಸಲಾಗಿದೆ ಎಂದು ಎಸ್ಪಿ ಶಾಲಿನಿ ಮಾಹಿತಿ ನೀಡಿದ್ದಾರೆ. “ಮರಳು ಲಾರಿಗಳಿಂದ ಲಂಚ ಪಡೆಯುತ್ತಿದ್ದ ಬಗ್ಗೆ ಮಾಹಿತಿ ಸಿಕ್ಕಿದ ತಕ್ಷಣ ಹಿರಿಯ ಐಪಿಎಸ್ ಅಧಿಕಾರಿ ಹಿಮಾಂಶು ಕುಮಾರ್ ಗಿರ್ವಾ ಪೊಲೀಸ್ ಠಾಣೆಗೆ ತೆರಳಿದ್ದರು. ಟ್ರಕ್ ಗಳಿಂದ ಹಣ ಪಡೆಯುತ್ತಿದ್ದ ಸ್ಟೇಶನ್ ಇನ್ ಚಾರ್ಜ್ ಹಾಗು ಕಾನ್ ಸ್ಟೇಬಲನ್ನು ರೆಡ್ ಹ್ಯಾಂಡಾಗಿ ಹಿಡಿದರು. ಈ ಸಂದರ್ಭ ಇಬ್ಬರು ಪೊಲೀಸ್ ಸಿಬ್ಬಂದಿ ಐಪಿಎಸ್ ಅಧಿಕಾರಿಯ ಮೇಲೆಯೇ ದಾಳಿ ನಡೆಸಿದ್ದಾರೆ” ಎಂದು ಶಾಲಿನಿ ಹೇಳಿದ್ದಾರೆ.
ಈ ಬಗ್ಗೆ ನಾಲ್ವರ ವಿರುದ್ಧ ಪ್ರಕರಣ ದಾಖಲಾಗಿದೆ ಎಂದವರು ಮಾಹಿತಿ ನೀಡಿದ್ದಾರೆ.
Next Story