ಜ.30ರಂದು ಸೌಹಾರ್ದತೆಗಾಗಿ ಮಾನವ ಸರಪಳಿ
ಉಡುಪಿ, ಜ.28: ಸೌಹಾರ್ದತೆಗಾಗಿ ಕರ್ನಾಟಕ ಉಡುಪಿ ಜಿಲ್ಲಾ ಸಮಿತಿ ವತಿಯಿಂದ ನಾಡಿನಲ್ಲಿ ಶಾಂತಿ, ಸಾಮರಸ್ಯ ಸದಾ ನೆಲೆಸಲಿ ಮತ್ತು ಜನತೆಯಲ್ಲಿ ಪರಸ್ಪರ ಧ್ವೇಷ ಹುಟ್ಟು ಹಾಕುವ ಹುನ್ನಾರಗಳು ನಿಲ್ಲಲಿ ಎಂಬ ಆಶಯದೊಂದಿಗೆ ಜ.30ರಂದು ಸಂಜೆ 4ಗಂಟೆಗೆ ಸೌಹಾರ್ದತೆಗಾಗಿ ಮಾನವ ಸರಪಳಿ ಯನ್ನು ಹಮ್ಮಿಕೊಳ್ಳಲಾಗಿದೆ.
ಉಡುಪಿಯಲ್ಲಿ ಸರ್ವಿಸ್ ಬಸ್ ನಿಲ್ದಾಣದ ಬಳಿಯ ಮಹಾತ್ಮಾ ಗಾಂಧಿ ಪ್ರತಿಮೆಯಿಂದ ಅಜ್ಜರಕಾಡಿನಲ್ಲಿರುವ ಗಾಂಧಿ ಪ್ರತಿಮೆಯವರೆಗೆ ಹಾಗೂ ಬ್ರಹ್ಮಾವರ ದಲ್ಲಿ ಎಸ್‌ಎಂಎಸ್ ಕಾಲೇಜು ಬಳಿಯಿಂದ ಆಕಾಶವಾಣಿ ವೃತ್ತದ ವರೆಗೆ ಮಾನವ ಸರಪಳಿ ರಚಿಸಲಾಗುವುದು. ಅದೇ ರೀತಿ ಕುಂದಾಪುರ ತಾಲೂಕಿನ ಕೋಟೇಶ್ವರ, ಕುಂದಾಪುರ, ತಲ್ಲೂರು, ತ್ರಾಸಿ, ನಾವುಂದ, ಬೈಂದೂರು ಮೊದಲಾದ ಕಡೆಗಳಲ್ಲಿ ಮಾನವ ಸರಪಳಿ ರಚಿಸಲಾಗುವುದು ಎಂದು ಸಮಿತಿಯ ಪ್ರಕಟಣೆ ತಿಳಿಸಿದೆ.
Next Story





