ರಶ್ಯದ ‘ಮಿತ್ರ’ ಮಿಲೊಸ್ ಜೆಕ್ ಅಧ್ಯಕ್ಷರಾಗಿ ಪುನರಾಯ್ಕೆ

ಪ್ರೇಗ್,ಜ.28: ರಶ್ಯ ಪರ ಧೋರಣೆಯ ಮಿಲೊಸ್ ಝೆಮೆನ್, ಜೆಕೊಸ್ಲೊ ವಾಕಿಯಾದ ಅಧ್ಯಕ್ಷರಾಗಿ ಶನಿವಾರ ಎರಡನೆ ಬಾರಿಗೆ ಪುನರಾಯ್ಕೆಯಾಗಿದ್ದಾರೆ. ಅತ್ಯಂತ ಜಿದ್ದಾಜಿದ್ದಿನ ಸ್ಪರ್ಧೆಯಲ್ಲಿ ಅವರು ತನ್ನ ಎದುರಾಳಿ ಯುರೋಪ್ ಪರ ಉದಾರವಾದಿ ಧೋರಣೆಯ ಜಿರಿ ಡ್ರಹೊಸ್‌ರನ್ನು ಅತ್ಯಂತ ಕಡಿಮೆ ಮತಗಳ ಅಂತರದಿಂದ ಸೋಲಿಸಿದ್ದಾರೆ.
ಝೆಮಾನ್ ಅವರಿಗೆ 51.36ಶೇಕಡ ಮತಗಳು ಲಭಿಸಿದ್ದರೆ, ಪ್ರಬಲ ಸ್ಪರ್ಧೆ ನೀಡಿರುವ ಡಹೊಸ್ 66.6 ಶೇ ಮತ ಗಳಿಸಿದ್ದಾರೆಂದು, ಚುನಾವಣಾ ಫಲಿತಾಂಶ ಪ್ರಕಟಿಸಿರುವ ಝೆಕ್ ಟಿವಿವಾಹಿನಿಯೊಂದು ವರದಿ ಮಾಡಿದೆ.
ಮಿಲೊಸ್‌ರ ಗೆಲುವಿನ ಬೆನ್ನಲ್ಲೇ ಅವರನ್ನು ಅಭಿನಂದಿಸಿದ ರಶ್ಯ ಹೇಳಿಕೆಯೊಂದನ್ನು ನೀಡಿ, ‘‘ರಶ್ಯ-ಝೆಕ್ ನಡುವೆ ಸ್ನೇಹಯುತ ಬಾಂಧವ್ಯದ ಬಗ್ಗೆ ಒಲವನ್ನು ಹೊಂದಿರುವ ಝೆಮಾನ್ ಅವರ ನಿಲುವನ್ನು ರಶ್ಯವು ಅಭಿನಂದಿಸಿದೆ.
73 ವರ್ಷ ವಯಸ್ಸಿನ ಝೆಮೆನ್ ಅವರಿಗೆ ಬಡವರು ಹಾಗೂ ಗ್ರಾಮೀಣ ಮತದಾರರು ಬೆಂಬಲಿಸಿದ್ದರೆ, ಸಿರಿವಂತ ಹಾಗೂ ಸುಶಿಕ್ಷಿತ ನಗರವಾಸಿಗಳಲ್ಲಿ ಹೆಚ್ಚಿನವರು ಡ್ರಹೊಸ್ ಪರವಾಗಿ ಮತಚಲಾಯಿಸಿದ್ದಾರೆಂದು ಚುನಾವಣಾ ವಿಶ್ಲೇಷಕರು ತಿಳಿಸಿದ್ದಾರೆ.







