ಪಲ್ಸ್ ಪೋಲಿಯೊ: ಉಡುಪಿ ಜಿಲ್ಲೆಯಲ್ಲಿ ಶೇ.93.87 ಸಾಧನೆ

ಉಡುಪಿ, ಜ.28: ಉಡುಪಿ ಜಿಲ್ಲೆಯಲ್ಲಿ 0-5 ವರ್ಷದೊಳಗಿನ 82,872 ಮಕ್ಕಳ ಪೈಕಿ 77,791 ಮಕ್ಕಳಿಗೆ ಪೋಲಿಯೊ ಲಸಿಕೆ ಹಾಕುವ ಮೂಲಕ ಶೇ.93.87ರಷ್ಟು ಸಾಧನೆ ಮಾಡಲಾಗಿದೆ.
ಉಡುಪಿ ತಾಲೂಕಿನಲ್ಲಿ 38,728 ಮಕ್ಕಳಲ್ಲಿ 35,396 ಮಕ್ಕಳಿಗೆ ಲಸಿಕೆ ಹಾಕಿ ಶೇ.91.40, ಕುಂದಾಪುರ ತಾಲೂಕಿನ 29,965 ಮಕ್ಕಳ ಪೈಕಿ 28,504 ಶೇ.95.12 ಮತ್ತು ಕಾರ್ಕಕಳ ತಾಲೂಕಿನ 14,179 ಮಕ್ಕಳಲ್ಲಿ 13,891 ಮಕ್ಕಳಿಗೆ 97.97ರಷ್ಟು ಸಾಧನೆ ಮಾಡಲಾಗಿದೆ.
ಇದಕ್ಕಾಗಿ ಉಡುಪಿ ಜಿಲ್ಲೆಯಲ್ಲಿ ಒಟ್ಟು 670 ಲಸಿಕಾ ಕೇಂದ್ರಗಳನ್ನು ಸ್ಥಾಪಿಸಲಾಗಿದ್ದು, ಒಟ್ಟು 2695 ಸ್ವಯಂ ಸೇವಕರು ಕರ್ತವ್ಯಕ್ಕೆ ನೇಮಿಸಲಾಗಿದೆ. ಅಲ್ಲದೆ ಒಟ್ಟು 30 ಟ್ರಾನ್ಸಿಸ್ಟ್ ಬೂತ್‌ಗಳು, 11 ಮೊಬೈಲ್ ತಂಡಗಳನ್ನು ರಚಿಸಲಾ ಗಿತ್ತು. ಇಂದು ಲಸಿಕೆ ಹಾಕದೆ ಬಿಟ್ಟು ಹೋದ ಮಕ್ಕಳಿಗೆ ಜ.29 ಮತ್ತು 30 ರಂದು ಸ್ವಯಂ ಸೇವಕರು ಮನೆ ಮನೆಗೆ ಭೇಟಿ ನೀಡಿ ಲಸಿಕೆ ಹಾಕಲಿದ್ದಾರೆ.
Next Story





