ಶಿವಮೊಗ್ಗ: ಗಾಣದ ಯಂತ್ರಕ್ಕೆ ಸಿಲುಕಿ ಕಾರ್ಮಿಕ ಮೃತ್ಯು
ಶಿವಮೊಗ್ಗ, ಜ. 28: ಆಯಿಲ್ ಮಿಲ್‍ವೊಂದರ ಗಾಣದ ಯಂತ್ರಕ್ಕೆ ಸಿಲುಕಿ ಕಾರ್ಮಿಕನೋರ್ವ ಮೃತಪಟ್ಟಿರುವ ಘಟನೆ ಜಿಲ್ಲೆಯ ಭದ್ರಾವತಿ ಪಟ್ಟಣದಲ್ಲಿ ಶನಿವಾರ ನಡೆದಿದೆ.
ಸೀಗೆಬಾಗಿ ಬಡಾವಣೆಯಲ್ಲಿರುವ ಸವಿತಾ ಆಯಿಲ್ ಮಿಲ್‍ನಲ್ಲಿ ಈ ಘಟನೆ ನಡೆದಿದ್ದು, ಭದ್ರಾ ಕಾಲೋನಿಯ ನಿವಾಸಿ ಮಂಜುನಾಥ್ (30) ಮೃತಪಟ್ಟ ಕಾರ್ಮಿಕ ಎಂದು ಗುರುತಿಸಲಾಗಿದೆ. ಈತನಿಗೆ ಪತ್ನಿ ಹಾಗೂ 9 ತಿಂಗಳ ಮಗುವಿದೆ. ಈ ಸಂಬಂಧ ಗಾಣದ ಮಿಲ್ ಮಾಲೀಕನ ವಿರುದ್ದ ಹಳೇನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಘಟನೆ ಹಿನ್ನೆಲೆ: ಮಂಜುನಾಥ್‍ರವರು ಗಾಣದ ಮಿಲ್‍ನಲ್ಲಿ ಕೆಲಸ ಮಾಡುತ್ತಿದ್ದಾಗ ಬಲಗೈನಲ್ಲಿ ಹಾಕಿಕೊಂಡಿದ್ದ ಕಬ್ಬಿಣದ ಬಳೆಯು ಯಂತ್ರಕ್ಕೆ ಸಿಲುಕಿದೆ. ನಂತರ ಇಡೀ ದೇಹ ಗಾಣದ ಯಂತ್ರದೊಳಗೆ ಸಿಲುಕಿದ ಪರಿಣಾಮ ಸ್ಥಳದಲ್ಲಿಯೇ ಅವರು ಅಸುನೀಗಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಮಿಲ್ ಮಾಲೀಕರು ಮೃತ ಮಂಜುನಾಥ್ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡುವ ಭರವಸೆ ನೀಡಿದ್ದಾರೆ.
Next Story





