ಕುದ್ರೋಳಿ: ಸರಕಾರಿ ಉರ್ದು ಶಾಲೆಯಲ್ಲಿ ಸಂಭ್ರಮದ ಗಣರಾಜ್ಯೋತ್ಸ

ಮಂಗಳೂರು, ಜ. 28: ಕುದ್ರೋಳಿಯ ದ.ಕ. ಜಿಲ್ಲಾ ಪಂಚಾಯತ್ ಸರಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಂಭ್ರಮದ ಗಣರಾಜ್ಯೋತ್ಸವ ಕಾರ್ಯಕ್ರಮ ನಡೆಯಿತು.
ಅಖ್ತರ್ ಅಲಿ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಯಾಗಿ ಭಾಗವಹಿಸಿದ ಕಾರ್ಪೊರೇಟರ್ ಅಬ್ದುಲ್ ಅಝೀಝ್ ಧ್ವಜಾರೋಹಣ ನೆರವೇರಿಸಿದರು. ಸಹ ಶಿಕ್ಷಕಿ ಪ್ರೇಮಾ ಜಿ.ಬಿ. ಮತ್ತು ಹಿರಿಯ ಶಿಕ್ಷಕಿ ಪಿಲೋಮಿನಾ ಸೆರಾವೊ, ಶಿಕ್ಷಕಿಯರಾದ ಅಸ್ಮಾ ಜಬೀನ್, ನಾಗರತ್ನ ಸಿ., ಸೌಮ್ಯಾ ಕೆ., ಮೈಮುನಾ ಹಾಗೂ ಉಮೇಶ್, ಎಸ್‌ಡಿಎಂಸಿ ಸದಸ್ಯರಾದ ಉಮರ್ ಫಕ್ವಿ, ಮುಹಮ್ಮದ್ ಸಾದಿಕ್, ನುರುಲ್ ಹುದಾ, ಜುಬೈದಾ, ರೇಶ್ಮಾ, ವಹಿದಾ ಉಪಸ್ಥಿತರಿದ್ದರು.
ಮುಖ್ಯ ಶಿಕ್ಷಕ ಮುಹಮ್ಮದ್ ಹನೀಫ್ ಸ್ವಾಗತಿಸಿದರು. ಶಿಕ್ಷಕಿ ಕವಿತಾ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕಿ ಅಕ್ಷತಾ ವಂದಿಸಿದರು.
Next Story





