ಶ್ರೀಕೃಷ್ಣ ಮಠಕ್ಕೆ ಕಾರ್ಮೆಲೈಟ್ ಧರ್ಮಗುರುಗಳ ತಂಡ ಭೇಟಿ

ಉಡುಪಿ, ಜ. 28: ವಿದೇಶಿಯ ಕಾರ್ಮೆಲೈಟ್ ಧರ್ಮಗುರುಗಳ ತಂಡ ಉಡುಪಿ ಶ್ರೀಕೃಷ್ಣಕ್ಕೆ ಶನಿವಾರ ಭೇಟಿ ನೀಡಿ ಪರ್ಯಾಯ ಪಲಿಮಾರು ಶ್ರೀವಿದ್ಯಾಧೀಶ ತೀರ್ಥ ಶ್ರೀ ಅವರೊಂದಿಗೆ ಮಾತುಕತೆ ನಡೆಸಿದೆ.
ಫಾ. ಗ್ರೆಗೊರಿ ಡಿಸೋಜ ತಂಡದ ನೇತೃತ್ವ ವಹಿಸಿದ್ದು, 11 ಮಂದಿ ಸದಸ್ಯರು ಈ ಸಂದರ್ಭ ಇದ್ದರು. ಅವರು ಕೊಚ್ಚಿ, ದೆಹಲಿ ಸಹಿತ ಮೊದಲಾದ ಕಡೆಗಳಿಗೆ ಭೇಟಿ ನೀಡಿ, ಬೆಂಗಳೂರಿನಲ್ಲಿ ನಡೆದ ಸಭೆಯಲ್ಲಿ ಭಾಗವಹಿಸಿದ ಬಳಿಕ ಶ್ರೀಕೃಷ್ಣ ಮಠಕ್ಕೆ ಆಗಮಿಸಿದ್ದಾರೆ.
ಈ ತಂಡದವರು ವಿವಿಧ ಶಿಕ್ಷಣ ಸಂಸ್ಥೆಯ ಮುಖ್ಯಸ್ಥರಾಗಿದ್ದು, ಪ್ರಸ್ತುತ ಸನ್ನಿವೇಶದಲ್ಲಿ ಭಾರತೀಯ ತತ್ವಶಾಸ್ತ್ರ, ಧರ್ಮದ ಕುರಿತು ಸಂಶೋಧನೆ ನಡೆಸುತ್ತಿ ದ್ದಾರೆ. ದೇವರ ಅಸ್ತಿತ್ವ, ವೇದಾಂತ, ಸಂಸ್ಕೃತಿ, ಧರ್ಮ ಬಳಕೆಯ ಕುರಿತು ಶ್ರೀ ಯೊಂದಿಗೆ ಒಂದು ಗಂಟೆಗೂ ಅಧಿಕ ಕಾಲ ಚರ್ಚೆ ನಡೆಸಿದ್ದಾರೆ.
Next Story





