‘ಪದ್ಮಾವತ್’ ಪ್ರದರ್ಶನ: ಚಿತ್ರಮಂದಿರದ ಮೇಲೆ ಪೆಟ್ರೋಲ್ ಬಾಂಬ್ ಎಸೆತ
.jpeg)
ಮುಝಾಫರ್‌ನಗರ್, ಜ. 27: ‘ಪದ್ಮಾವತ್’ ಚಲನಚಿತ್ರ ಪ್ರದರ್ಶಿಸುತ್ತಿದ್ದ ಇಲ್ಲಿನ ಚಿತ್ರಮಂದಿರದ ಮೇಲೆ ಪೆಟ್ರೋಲ್ ಬಾಂಬ್ ಎಸೆದ ಘಟನೆ ಶನಿವಾರ ಸಂಜೆ ನಡೆದಿದೆ ಎಂದು ಪೊಲೀಸ್ ಅಧಿಕಾರಿ ಹರೀಶ್ ಭಂಧೋರಿಯಾ ತಿಳಿಸಿದ್ದಾರೆ.
ದುಷ್ಕರ್ಮಿಗಳನ್ನು ಇನ್ನಷ್ಟೇ ಗುರುತಿಸಬೇಕಿದೆ. ಬೈಕ್‌ನಲ್ಲಿ ಆಗಮಿಸಿದ ದುಷ್ಕರ್ಮಿಗಳು ಪೆಟ್ರೋಲ್ ಬಾಂಬ್ ಎಸೆದು ಸಿನೆಮಾ ಮಂದಿರಕ್ಕೆ ಬೆಂಕಿ ಹಚ್ಚಲು ಪ್ರಯತ್ನಿಸಿದರು ಎಂದು ಅವರು ತಿಳಿಸಿದ್ದಾರೆ. ಸಿನೆಮಾ ಮಂದಿರಕ್ಕೆ ಯಾವುದೇ ಹಾನಿಯಾಗಿಲ್ಲ ಎಂದು ಸಿನೆಮಾ ಮಂದಿರದ ಮಾಲಕ ತಿಳಿಸಿದ್ದಾರೆ. ಈ ಘಟನೆ ಬಳಿಕ ‘ಪದ್ಮಾವತ್’ ಚಲನಚಿತ್ರ ಪ್ರದರ್ಶಿಸುತ್ತಿರುವ ಇಲ್ಲಿನ ಚಂದ್ರ, ಮಾಯಾ, ಕಾರ್ನಿವಾಲ್ ಸಿನೆಮಾ ಮಂದಿರದ ಭದ್ರತೆ ಹೆಚ್ಚಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Next Story