ಎಸ್ಸೆಸ್ಸೆಫ್ ಗಾಂಧಿನಗರ ಶಾಖೆ : ನೂತನ ಪದಾಧಿಕಾರಿಗಳ ಆಯ್ಕೆ

ಸುಳ್ಯ, ಜ. 28: ಎಸ್ಸೆಸ್ಸೆಫ್ ಗಾಂಧಿನಗರ ಶಾಖೆಯ ವಾರ್ಷಿಕ ಮಹಾ ಸಭೆ ಶಾಖಾಧ್ಯಕ್ಷ ಆರಿಫ್ ಬುಶ್ರಾ ಅಧ್ಯಕ್ಷತೆಯಲ್ಲಿ ರವಿವಾರ ಸುಳ್ಯ ಸುನ್ನಿ ಸೆಂಟರಿನಲ್ಲಿ ನಡೆಯಿತು.
ಎಸ್ಸೆಸ್ಸೆಫ್ ಸುಳ್ಯ ಸೆಕ್ಟರ್ ಕಾರ್ಯಕಾರಿ ಸಮಿತಿಯ ಸದಸ್ಯ ಫೈಝಲ್ ಝುಹ್ರಿ ಕಲ್ಲುಗುಂಡಿ ಉದ್ಘಾಟಿಸಿದರು. ಗಾಂಧಿನಗರ ಶಾಖೆಯ ಉಸ್ತುವಾರಿ, ಸುಳ್ಯ ಸೆಕ್ಟರ್ ಕಾರ್ಯಕಾರಿ ಸಮಿತಿಯ ಉಪಾಧ್ಯಕ್ಷ ಸಿರಾಜ್ ಹಿಮಮಿ ಕುಂಭಕ್ಕೋಡ್ ವೀಕ್ಷಕರಾಗಿ ಆಗಮಿಸಿ ಸಂಘಟನಾ ತರಬೇತಿ ನೀಡಿದರು. ಡಿವಿಷನ್ ಸಮಿತಿ ಕಾರ್ಯದರ್ಶಿ ಅಬ್ಬಾಸ್ ಎ.ಬಿ. ಮುಖ್ಯ ಅತಿಥಿಯಾಗಿದ್ದರು. ಪ್ರ.ಕಾರ್ಯದರ್ಶಿ ವರದಿ ಮಂಡನೆ ಮತ್ತು ಕೋಶಾಧಿಕಾರಿ ಲೆಕ್ಕ ಪತ್ರ ಮಂಡಿಸಿದರು. ನಂತರ ನೂತನ ಸಮಿತಿಯನ್ನು ರಚಿಸಲಾಯಿತು.
ಅಧ್ಯಕ್ಷರಾಗಿ ಆರಿಫ್ ಬುಶ್ರಾ, ಪ್ರಧಾನ ಕಾರ್ಯದರ್ಶಿಯಾಗಿ ಆಬಿದ್ ಕಲ್ಲುಮುಟ್ಲು, ಕೋಶಾಧಿಕಾರಿಯಾಗಿ ಸವಾದ್ ಮುಹಮ್ಮದ್, ಉಪಾಧ್ಯಕ್ಷರಾಗಿ ಸೈಫುದ್ದೀನ್ ಎಂ.ಎಸ್, ಅಬ್ದುಲ್ ನಾಫಿ, ಕಾರ್ಯದರ್ಶಿಗಳಾಗಿ ಇಲ್ಯಾಸ್ ಗುರುಂಪು, ಅಕ್ರಂ ಗಾಂಧಿನಗರ ಹಾಗೂ ಸದಸ್ಯರಾಗಿ ಸ್ವಬಾಹ್ ಹಮೀದ್, ಹಾರಿಸ್ ಸಿ.ಎ, ಸ್ವಾದಿಕ್ ಪಿ.ಜಿ, ರಿಯಾಝ್ ಕೆ.ಎ, ಬಶೀರ್ ಕಲ್ಲುಮುಟ್ಲು, ತಶ್ರೀಫ್ ನಾವೂರು ಆಯ್ಕೆಯಾದರು.
ಪ್ರ. ಕಾರ್ಯದರ್ಶಿ ಸವಾದ್ ಮುಹಮ್ಮದ್ ಸ್ವಾಗತಿಸಿ, ನೂತನ ಪ್ರ.ಕಾರ್ಯದರ್ಶಿ ಆಬಿದ್ ಕಲ್ಲುಮುಟ್ಲು ವಂದಿಸಿದರು.







