Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಾರ್ತಾಭಾರತಿ ವಿಶೇಷ
  3. ಓ ಮೆಣಸೇ
  4. ಓ ಮೆಣಸೇ..

ಓ ಮೆಣಸೇ..

ಪಿ.ಎ.ರೈಪಿ.ಎ.ರೈ29 Jan 2018 12:28 AM IST
share
ಓ ಮೆಣಸೇ..

ನಮ್ಮ ಸೇನೆ ಗಡಿಯಾಚೆಗೂ ನುಗ್ಗಬಲ್ಲುದು - ರಾಜನಾಥ್ ಸಿಂಗ್, ಕೇಂದ್ರ ಸಚಿವ

ಗಡಿದಾಟಿ ದಾಳಿ ನಡೆಸುತ್ತಿರುವ ಪಾಕಿಸ್ತಾನಿ ಸೈನಿಕರ ಕುರಿತಂತೆ ಸ್ಪಷ್ಟೀಕರಣ ನೀಡಿ.

---------------------

ಪ್ರಧಾನಿ ಮೋದಿ ಸಾಮಾಜಿಕ ವಿಜ್ಞಾನಿ - ರಾಮನಾಥ್ ಕೋವಿಂದ್, ರಾಷ್ಟ್ರಪತಿ

ಆ ವಿಜ್ಞಾನಿಯ ಲ್ಯಾಬ್‌ನಲ್ಲಿ ಸೃಷ್ಟಿಯಾದವರಲ್ಲವೇ ನೀವು?

---------------------

ಹಿಂದೂ ಭಾವನೆ ಮರೆತು ಹೋದರೆ ಭಾರತ ಛಿದ್ರಗೊಳ್ಳುತ್ತದೆ - ಮೋಹನ್ ಭಾಗವತ್, ಆರೆಸ್ಸೆಸ್ ಮುಖ್ಯಸ್ಥ

ಭಾರತೀಯ ಎನ್ನುವ ಭಾವನೆ ಮರೆತರೂ ಪರವಾಗಿಲ್ಲವೇ?

---------------------

ಸಿಎಂ ಸಿದ್ದರಾಮಯ್ಯ ಶಿವಮೊಗ್ಗದಲ್ಲಿ ನಿರ್ಮಿಸಿರುವ ಹೊಸ ಜೈಲಿಗೆ ಹೋಗಲಿದ್ದಾರೆ - ಪ್ರಕಾಶ್ ಜಾವೇಡ್ಕರ್, ಬಿಜೆಪಿ ನಾಯಕ

ಹಳೆ ಜೈಲುಗಳೆಲ್ಲ ಬಿಜೆಪಿ ನಾಯಕರಿಂದ ಭರ್ತಿಯಾಗಿವೆ ಎನ್ನುವ ಕಾರಣಕ್ಕಾಗಿಯೇ?

---------------------

ಬಿಜೆಪಿಯನ್ನು ಸೋಲಿಸುವ ಸಲುವಾಗಿ ಕಾಂಗ್ರೆಸ್‌ನೊಂದಿಗೆ ಕೈಜೋಡಿಸುವುದಿಲ್ಲ - ಸೀತಾರಾಮ್ ಯೆಚೂರಿ, ಸಿಪಿಐಎಂ ನಾಯಕ

ಹಾಗಾದರೆ ಬಿಜೆಪಿಯನ್ನು ಗೆಲ್ಲಿಸುವ ಸಲುವಾಗಿ ಯಾರ ಜೊತೆ ಕೈ ಜೋಡಿಸುತ್ತೀರಿ?

---------------------

ಪೊಲೀಸರ ಮೇಲೆ ಯಾರೇ ಹಲ್ಲೆ ನಡೆಸಿದರೂ ಪ್ರತಿಯಾಗಿ ಪೊಲೀಸರು ಗುಂಡುಹಾರಿಸಬೇಕು - ರಾಮಲಿಂಗಾರೆಡ್ಡಿ, ಸಚಿವ

ಶ್ರೀಸಾಮಾನ್ಯನ ಮೇಲೆ ಹಲ್ಲೆ ನಡೆಸಿದರೆ ಪರವಾಗಿಲ್ಲವೇ?

---------------------

ಕಂಬಳದ ಕೋಣಗಳನ್ನು ಅದರ ಮಾಲಕರು ತಮ್ಮ ಮಕ್ಕಳಂತೆ ಪೋಷಿಸಿ, ಪ್ರೀತಿ ತೋರುತ್ತಾರೆ. - ಎ.ಮಂಜು, ಸಚಿವ

ತಮ್ಮ ಮಕ್ಕಳನ್ನು ಅವರು ಕಂಬಳದ ಕರೆಯಲ್ಲಿ ಬೆತ್ತ ಹಿಡಿದು ಓಡಿಸಿದ ಉದಾಹರಣೆ ಎಲ್ಲೂ ಇಲ್ಲ.

---------------------

ಗೋಹತ್ಯೆ ನರಹತ್ಯೆಗಿಂತಲೂ ಘೋರ - ಸುಬ್ರಮಣಿಯನ್ ಸ್ವಾಮಿ, ಬಿಜೆಪಿ ಮುಖಂಡ

ಗೋವುಗಳನ್ನು ಹತ್ಯೆ ಮಾಡದೆಯೇ ಮಾಂಸ ರಫ್ತು ಮಾಡುತ್ತಿರುವ ಏಕೈಕ ದೇಶ ಭಾರತ.

---------------------

ಸಿಎಂ ಸಿದ್ದರಾಮಯ್ಯರಿಗೆ ಆರೆಸ್ಸೆಸ್, ವಿಎಚ್‌ಪಿ, ಬಜರಂಗದಳ ಎಂದರೆ ಏನು ಎಂದೇ ಗೊತ್ತಿಲ್ಲ. - ಕೋಟ ಶ್ರೀನಿವಾಸ ಪೂಜಾರಿ, ವಿ.ಪ. ಸದಸ್ಯ

ಏನು ಎಂದು ಗೊತ್ತಿದ್ದಿದ್ದರೆ ಇಷ್ಟು ಹೊತ್ತಿಗೆ ನಿಮ್ಮ ಕಾರ್ಯಕರ್ತರು ಜೈಲಲ್ಲಿರುತ್ತಿದ್ದರು.

---------------------

ಕಾಂಗ್ರೆಸ್ ಅನಿವಾರ್ಯತೆಯ ಧ್ವನಿ ದೇಶದ ನಾಲ್ಕು ದಿಕ್ಕುಗಳಲ್ಲಿಯೂ ಮೇಳೈಸುತ್ತಿದೆ - ಆಸ್ಕರ್ ಫೆರ್ನಾಂಡಿಸ್, ಕಾಂಗ್ರೆಸ್ ಮುಖಂಡ

ಆದರೆ ಕಾಂಗ್ರೆಸ್‌ಗೆ ನಿಮ್ಮ ಅನಿರ್ವಾಯತೆಯ ಕುರಿತಂತೆ ಅಸಮಾಧಾನವಿದೆ.

---------------------

ಕೇಂದ್ರ ಸಚಿವ ಅನಂತಕುಮಾರ್ ಹೆಗಡೆ ಹೇಳಿಕೆಗಳಿಗೆ ಪ್ರತಿಕ್ರಿಯೆ ನೀಡಿದರೆ ನಾವು ಚಿಕ್ಕವರಾಗುತ್ತೇವೆ - ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್ ನಾಯಕ

ಕೇಸು ದಾಖಲಿಸಬಹುದಲ್ಲ?

---------------------

ನನ್ನ ‘ನಾಯಿ’ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ - ಅನಂತಕುಮಾರ ಹೆಗಡೆ, ಕೇಂದ್ರ ಸಚಿವ

ನಿಮ್ಮ ನಾಯಿಯ ಬಳಿ ಇನ್ನೊಮ್ಮೆ ಸರಿಯಾದ ಹೇಳಿಕೆ ನೀಡಲು ತಿಳಿಸಿ.

---------------------

ಕಾಂಗ್ರೆಸ್ ಪಕ್ಷ ಕೂಡ ‘ಕಾಂಗ್ರೆಸ್ ಸಂಸ್ಕೃತಿ’ಯಿಂದ ಮುಕ್ತಗೊಳ್ಳಬೇಕು - ನರೇಂದ್ರ ಮೋದಿ, ಪ್ರಧಾನಿ

ಬಿಜೆಪಿ ಕ್ರಿಮಿನಲ್ ಸಂಸ್ಕೃತಿಯಿಂದ ಮುಕ್ತವಾಗುವುದು ಯಾವಾಗ?

---------------------

ಜೆಡಿಎಸ್ ಒಂದು ‘ಸರ್ಕಸ್ ಕಂಪೆನಿ’ ಇದ್ದಂತೆ - ಸಿಟಿ ರವಿ, ಶಾಸಕ

ಜೋಕರ್ ಒಬ್ಬರ ಕೊರತೆ ಇದೆಯಂತೆ. ನೀವು ಪ್ರಯತ್ನಿಸಬಹುದು.

---------------------

ಕಾಂಗ್ರೆಸ್ ನಡೆ ಮನೆ ಕಡೆಗೆ - ಡಿ.ವಿ. ಸದಾನಂದ ಗೌಡ, ಕೇಂದ್ರ ಸಚಿವ

ಬಿಜೆಪಿಯ ಜೈಲಿನ ಕಡೆ ನಡಿಗೆಗಿಂತ ವಾಸಿ.

---------------------

ನನ್ನ ಆತ್ಮಕತೆಯಿಂದ ಯಾರಿಗಾದರೂ ನೋವಾದರೆ ಅದಕ್ಕೆ ನಾನು ಹೊಣೆಯಲ್ಲ - ಜನಾರ್ದನ ಪೂಜಾರಿ, ಕಾಂಗ್ರೆಸ್ ಮುಖಂಡ

ನಾರಾಯಣ ಗುರುಗಳು ಮಾತ್ರ ನಿಮ್ಮ ಆತ್ಮಕತೆ ಓದಿ ನಕ್ಕು ಬಿಟ್ಟರಂತೆ.

---------------------

ನನ್ನ ಮಾತು ಮೀರಿ 2006ರಲ್ಲಿ ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡದ್ದಕ್ಕಾಗಿ ಕುಮಾರಸ್ವಾಮಿ ಈಗಲೂ ಪಶ್ಚಾತ್ತಾಪ ಪಡುತ್ತಿದ್ದಾರೆ - ದೇವೇಗೌಡ, ಮಾಜಿ ಪ್ರಧಾನಿ

ಅದಕ್ಕಾಗಿ ಈ ಬಾರಿ ನಿಮ್ಮ ಒಪ್ಪಿಗೆ ಪಡೆದುಕೊಂಡೇ ಬಿಜೆಪಿ ಜೊತೆ ಮೈತ್ರಿ ಮಾಡುವ ಸಿದ್ಧತೆಯಲ್ಲಿದ್ದಾರೆ.

---------------------

ಸಚಿವ ಅನಂತಕುಮಾರ್ ಹೆಗಡೆ ದಲಿತರನ್ನು ನಾಯಿಗಳು ಎಂದು ಕರೆದದ್ದು ಸರಿಯಲ್ಲ - ಡಾ.ಜಿ. ಪರಮೇಶ್ವರ್, ಕೆಪಿಸಿಸಿ ಅಧ್ಯಕ್ಷ

ಕಚ್ಚುವುದಿಲ್ಲ ಎಂಬ ಧೈರ್ಯದಿಂದ ಇರಬೇಕು.

---------------------

ಬಾಹುಬಲಿ ಮಹಾಕಾವ್ಯ ಬರೆಯಲು ಒಂದು ವರ್ಷ ಮೀನು ಸೇವನೆ ತ್ಯಜಿಸಿದ್ದೇನೆ - ವೀರಪ್ಪ ಮೊಯ್ಲಿ, ಸಂಸದ

ಬಟ್ಟೆ ತ್ಯಜಿಸಿದ್ದೇನೆ ಎಂದು ಹೇಳಲಿಲ್ಲವಲ್ಲ, ಪುಣ್ಯ.

---------------------

ಹೊಸ ಹಕ್ಕಿಗಳು (ರಜನಿಕಾಂತ್, ಕಮಲ್‌ಹಾಸನ್) ಹಾರಲು ಬಯಸುತ್ತವೆ ಆದರೆ ಅವು ಹೆಚ್ಚು ದೂರ ಹಾರದು - ಎಂ.ಕೆ. ಸ್ಟಾಲಿನ್, ಡಿಎಂಕೆ ಮುಖಂಡ

ರಣಹದ್ದುಗಳು ಎಷ್ಟು ಎತ್ತರ ಹಾರಿದರೂ ಏನು ಪ್ರಯೋಜನ?

---------------------

ಬಿಜೆಪಿಯವರು ಇನ್ನು ಮುಂದೆ ಸುಳ್ಳು ಹೇಳಿದರೆ ಸುಮ್ಮನಿರುವುದಿಲ್ಲ - ದಿನೇಶ್ ಗುಂಡೂರಾವ್, ಕೆಪಿಸಿಸಿ ಕಾರ್ಯಾಧ್ಯಕ್ಷ

ಪ್ರತಿಯಾಗಿ ನೀವು ಅವರಿಗಿಂತ ದೊಡ್ಡ ಸುಳ್ಳು ಹೇಳಲು ತಯಾರಿಯೇ?

---------------------

ಚುನಾವಣೆ ಘೋಷಣೆಯಾದ ತಕ್ಷಣ ಬಿಜೆಪಿ ಸೇರುತ್ತೇನೆ - ಹಾಲಾಡಿ ಶ್ರೀನಿವಾಸ ಶೆಟ್ಟಿ, ಶಾಸಕ

ಮತ್ತು ತ್ಯಜಿಸುವ ದಿನವನ್ನೂ ಹೇಳಿ ಬಿಡಿ.

---------------------

ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಆರೆಸ್ಸೆಸ್ ದ್ವೇಷಿಯಾಗಿರಲಿಲ್ಲ - ಎಲ್.ಕೆ. ಅಡ್ವಾಣಿ, ಬಿಜೆಪಿ ಮುಖಂಡ

ಆರೆಸ್ಸೆಸ್ ಬಹುಶಃ ಶಾಸ್ತ್ರಿಯ ದ್ವೇಷಿಯಾಗಿತ್ತು ಎಂದು ಕಾಣುತ್ತದೆ.

---------------------

ನಾನೇನು ಎಂಬುದು ಜನರಿಗೆ ಗೊತ್ತಿದೆ - ಸಿದ್ದರಾಮಯ್ಯ, ಮುಖ್ಯಮಂತ್ರಿ

ಆದುದರಿಂದಲೇ ಕಾಂಗ್ರೆಸ್ ನಾಯಕರಿಗೆ ಒಳಗೊಳಗೆ ಭಯ.
 

share
ಪಿ.ಎ.ರೈ
ಪಿ.ಎ.ರೈ
Next Story
X