ತಲ್ಲೂರಿನ ನಾರಾಯಣ ವಿಶೇಷ ಶಾಲೆಯ ದಶಮಾನೋತ್ಸವ

ಕುಂದಾಪುರ, ಜ.29: ಸಹನೆ, ತಾಳ್ಮೆ, ಭಾವನಾತ್ಮಕ ಸಂಬಂಧಗಳನ್ನು ಹೊಂದಿರುವವರಿಂದ ಮಾತ್ರ ವಿಶೇಷ ಶಾಲೆಗಳನ್ನು ನಡೆಸಲು ಸಾಧ್ಯ. ಇಂತಹ ಸಂಸ್ಥೆ ಗಳಿಗೆ ಬೇಕಾದ ಸವಲತ್ತುಗಳನ್ನು ಒದಗಿಸುವ ಪ್ರಾಮಾಣಿಕತೆ, ಬದ್ಧತೆಗಳು ಜನಪ್ರತಿನಿಧಿಗಳಲ್ಲಿ ಇರಬೇಕು ಎಂದು ವಿಧಾನ ಪರಿಷತ್ ಸದಸ್ಯ ಕೆ.ಪ್ರತಾಪ ಚಂದ್ರ ಶೆಟ್ಟಿ ಹೇಳಿದ್ದಾರೆ.
ತಲ್ಲೂರಿನ ನಾರಾಯಣ ವಿಶೇಷ ಶಾಲೆ ಹಾಗೂ ತಲ್ಲೂರು ಫ್ಯಾಮಿಲಿ ಟ್ರಸ್ಟ್ ಗಳ ದಶಮಾನೋತ್ಸವ ಕಾರ್ಯಕ್ರಮಗಳನ್ನು ರವಿವಾರ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಶಾಲೆಗೆ ಸೆಲ್ಕೊ ಸಂಸ್ಥೆ ಕೊಡುಗೆಯಾಗಿ ನೀಡಿರುವ ಸೋಲಾರ್ ಪರಿಕರಗಳು ಮತ್ತು ಇಲರ್ನಿಂಗ್ ಟ್ಯಾಬ್ಲೆಟ್‌ಗಳನ್ನು ಬೈಂದೂರು ಶಾಸಕ ಹಾಗೂ ಕೆಎಸ್ ಆರ್‌ಟಿಸಿ ನಿಗಮದ ಅಧ್ಯಕ್ಷ ಕೆ.ಗೋಪಾಲ ಪೂಜಾರಿ ಅನಾವರಣಗೊಳಿಸಿದರು. ಶಾಲೆಯ ಹೊರಾಂಗಣ ಸಭಾಂಗಣದ ಪೆವಿಲಿಯನ್ ಶಂಕು ಸ್ಥಾಪನೆಯನ್ನು ಜಿಲ್ಲಾ ವಿಕಲಚೇತನರ ಸಬಲೀಕರಣ ಇಲಾಖೆಯ ಅಧಿಕಾರಿ ನಿರಂಜನ ಭಟ್ ನೆರವೇರಿಸಿದರು.
ನ್ಯಾಯವಾದಿ ಟಿ.ಬಿ.ಶೆಟ್ಟಿ, ಜಿಪಂ ಸದಸ್ಯೆ ಜ್ಯೋತಿ ಅಚ್ಯುತ್, ತಾಪಂ ಸದಸ್ಯ ಕರಣ್‌ಕುಮಾರ್ ಪೂಜಾರಿ, ಗ್ರಾಪಂ ಅಧ್ಯಕ್ಷ ಆನಂದ ಬಿಲ್ಲವ, ಶಾಲಾ ಮುಖ್ಯೋಪಾಧ್ಯಾಯ ಶಂಕರ್ ಬಹುಮಾನಗಳನ್ನು ವಿತರಿಸಿದರು. ಅಧ್ಯಕ್ಷತೆ ಯನ್ನು ತಲ್ಲೂರು ಫ್ಯಾಮಿಲಿ ಟ್ರಸ್ಟಿನ ಆಡಳಿತ ಟ್ರಸ್ಟಿ ಸುರೇಶ ತಲ್ಲೂರು ವಹಿಸಿದ್ದರು.
ಟ್ರಸ್ಟಿ ವಸಂತ ಶಾನುಭೋಗ್ ಸ್ವಾಗತಿಸಿದರೆ, ರಾಜಾರಾಂ ತಲ್ಲೂರು ಪ್ರಾಸ್ತಾವಿಕವಾಗಿ ಮಾತನಾಡಿದರು. ಶಾಲೆಯ ಮುಖ್ಯೋಪಾಧ್ಯಾಯಿನಿ ಪ್ರೇಮಾ ಲೂಯಿಸ್ ವರದಿ ವಾಚಿಸಿದರು. ಟ್ರಸ್ಟಿ ಮನೋರಮಾ ತಲ್ಲೂರು ವಂದಿಸಿ ದರು. ವಿವಿಧ ವಿಶೇಷ ಶಾಲೆಗಳು ಹಾಗೂ ಸ್ಥಳೀಯ ಶಾಲಾ ಮಕ್ಕಳಿಂದ ವೈವಿಧ್ಯ ಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ಜರಗಿದವು. ಬೆಳಗ್ಗೆ ನಡೆದ ವಿವಿಧ ಸ್ಪರ್ಧೆಗಳನ್ನು ಗಾ್ರಪಂ ಸದಸ್ಯೆ ಜುಡಿತ್ ಉದ್ಘಾಟಿಸಿದರು.







