ದಿನಬಳಕೆಯ ವಸ್ತುಗಳ ಬೆಲೆ ಏರಿಕೆ ನಿಯಂತ್ರಿಸುವಲ್ಲಿ ಮೋದಿ ಸರಕಾರ ವಿಫಲ : ಗೋಪಾಲ್ ಭಂಡಾರಿ

ಕಾರ್ಕಳ,ಜ.29 : ದಿನಬಳಕೆಯ ವಸ್ತುಗಳ ಬೆಲೆ ಏರಿಕೆ ನಿಯಂತ್ರಿಸುವಲ್ಲಿ ಮೋದಿ ಆಡಳಿತದ ಕೇಂದ್ರ ಸರಕಾರ ಸಂಪೂರ್ಣ ವಿಫಲವಾಗಿದೆ.
ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ಮಾಜಿ ಶಾಸಕ ಗೋಪಾಲ್ ಭಂಡಾರಿ ಹೇಳಿದ್ದಾರೆ.
ಅವರು ಪೆಟ್ರೋಲ್-ಡಿಸೇಲ್ ಮತ್ತು ದಿನಬಳಕೆಯ ವಸ್ತುಗಳ ಬೆಲೆ ಏರಿಕೆ ಕುರಿತು ಕೇಂದ್ರ ಸರಕಾರದ ಜನವಿರೋಧಿ ನೀತಿಯನ್ನು ಖಂಡಿಸಿ ಬಸ್ ನಿಲ್ದಾಣದಲ್ಲಿ ಸೋಮವಾರ ನಡೆದ ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿ, ದಿನದಿಂದ ದಿನಕ್ಕೆ ಅಗತ್ಯ ವಸ್ತಗಳ ಬೆಲೆ ಗಗನಕ್ಕೇರುತ್ತಿದೆ. ಅಂದು 'ಅಚ್ಚೆ ದಿನ್' ಬರುವುದಾಗಿ ಹೇಳಿ ಇಂದು ಇಂತಹ ಕೆಟ್ಟ ಸ್ಥಿತಿಯನ್ನು ನಿರ್ಮಾಣ ಮಾಡುವ ಮೂಲಕ ಬಡವರ ಬದುಕಿನಲ್ಲಿ ಚೆಲ್ಲಾಟ ಆಡುತ್ತಿದ್ದಾರೆ, ಬರೀ ಸುಳ್ಳು ಮೋಸ ಮಾಡುವ ಮೂಲಕ ಅಧಿಕಾರಕ್ಕೆ ಬಂದ ಬಳಿಕ ಹೇಳಿದ ಒಂದು ಅಶ್ವಾಸನೆ ಈಡೇರಿಸಲಿಲ್ಲ. ಬಡವರ ಖಾತೆಗೆ 15ಲಕ್ಷ ನೀಡುವುದಾಗಿ ಹೇಳಿ ವರ್ಷ ಕಳೆದರೂ ಇನ್ನು ಬಂದಿಲ್ಲ. ಇಂತಹ ಹಲವು ಸುಳ್ಳು ಹೇಳುವ ಪೃವತ್ತಿ ಬಿಜೆಪಿಯದ್ದಾಗಿದೆ ಎಂದರು.
ಕಾರ್ಕಳ ಶಾಸಕರು ಇದೇ ಚಾಳಿಯನ್ನು ಮುಂದುವರೆಸುತ್ತಾ ಬಂದಿದ್ದಾರೆ. ಹುಲಿಯೋಜನೆ ಜಾರಿಯಾಗುತ್ತೆ ಎಂದು ಹೇಳಿ ಈ ಬಾಗದ ಜನರಿಗೆ ಸುಳ್ಳು ಹೇಳಿದ್ದಾರೆ. ಇದೀಗ ಹುಲಿಯೋಜನೆಗೆ ಕೇಂದ್ರದಿಂದ ಜಾರಿಗೊಳಿಸುವ ಎಲ್ಲಾ ಸೂಚನೆ ಇದ್ದರೂ ಸಂಸದೆ ಹಾಗೂ ಶಾಸಕರು ಬಾಯಿಬಿಡುತ್ತಿಲ್ಲ. ಸುಚಿತ್ರ ಕೊಲೆ ಪ್ರಕರಣದಲ್ಲಿ ನ್ಯಾಯಕೊಡಿಸುವುದಾಗಿ ಜನರನ್ನು ನಂಬಿಸಿ ಚುನಾವಣೆ ಗೆದ್ದ ಬಳಿಕ ಕಾರ್ಕಳ ಶಾಸಕ ಸುನಿಲ್ ಆ ವಿಚಾರವನ್ನೇ ಮರೆತ್ತಿದ್ದಾರೆ. ಸುಳ್ಳು ಹೇಳುವುದನ್ನು ಬಿಟ್ಟು ಮುಂದಿನ ದಿನಗಳಲ್ಲಿ ಒಳ್ಳೆಯ ಚಿಂತನೆ ಹಾಗೂ ಒಳ್ಳೆಯ ಕಾರ್ಯಕ್ರಮಗಳನ್ನು ಮೈಗೂಡಿಸಿ ಸುಳ್ಳು ಹೇಳುವುದನ್ನು ಕಡಿಮೆ ಮಾಡಿ ಎಂದರು.
ಇಂದಿರಾ ಕ್ಯಾಂಟೀನ್ ನಗರಕ್ಕೆ ಬೇಕು ಎಂದು ಮುಖ್ಯಮಂತ್ರಿಗಳಿಗೆ ಒತ್ತಡ ಹಾಕುವ ಮೂಲಕ ಕಾರ್ಕಳಕ್ಕೆ ಇಂದು ಈ ಭಾಗ್ಯ ದೊರೆತಿದೆ ಅದರೆ ಶಾಸಕರು ಈ ಯೋಜನೆ ವಿಫಲ ಮಾಡಬೇಕು ಎಂದು ನಗರದಿಂದ ನಿರುಪಯುಕ್ತ ಬಂಡೀಮಠ ನಿಲ್ದಾಣಕ್ಕೆ ವರ್ಗಾಯಿಸುವ ಪ್ರಯತ್ನ ನಡೆಸುತ್ತಿದ್ದಾರೆ ಎಂದು ಅರೋಪಿಸಿದರು.
ಉಡುಪಿ ಪ್ರಚಾರ ಸಮಿತಿಯ ಸದಸ್ಯ ಅಮೃತ್ ಶೆಣೈ,ಉಡುಪಿ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಮುನಿಯಾಲು ಉದಯ ಶೆಟ್ಟಿ,ಉಡುಪಿ ಜಿಲ್ಲಾ ಕಾರ್ಯದರ್ಶಿ ಶೇಖರ ಮಡಿವಾಳ ಹೆಬ್ರ್ರಿ ಬ್ಲಾಕ್ ಕಾಗ್ರೆಸ್ ಅಧ್ಯಕ್ಷ ನೀರೆ ಕೃಷ್ಣ ಶೆಟ್ಟಿ, ಕಾರ್ಕಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುಧಾಕರ್ ಕೋಟ್ಯಾನ್, ರಾಜ್ಯ ಕಾಂಗ್ರೆಸ್ ಕಾರ್ಯದರ್ಶಿ ರವಿಶಂಕರ್ ಶೇರಿಗಾರ್, ಕಾರ್ಕಳ ಯುವ ಕಾಂಗ್ರೆಸ್ ಅಧ್ಯಕ್ಷ ದೀಪಕ್ ಕೋಟ್ಯಾನ್ ಇನ್ನ, ಗ್ರಾ.ಪಂ.ಅಧ್ಯಕ್ಷರುಗಳಾದ ಸಂತೋಷ್ ಶೆಟ್ಟಿ, ಅಜಿತ್ ಹೆಗ್ಡೆ ಮಾಳ, ತಾ.ಪಂ.ಸದಸ್ಯ ಸುಧಾಕರ ಶೆಟ್ಟಿ, ಅಲ್ಪ ಸಂಖ್ಯಾತರ ಘಟಕದ ಅಧ್ಯಕ್ಷ ಮೊಹಮ್ಮದ್ ಅಸ್ಲಾಂ, ಕಾಂಗ್ರೆಸ್ ಪ್ರಮುಖರಾದ ಸೀತಾರಾಮ್, ಸುಭಿತ್ ಕುಮಾರ್, ಕೆ.ಎಸ್.ಇಮ್ತಿಯಾಜ್ ಅಹ್ಮದ್, ಬಿ.ಕೃಷ್ಣಮೂರ್ತಿ, ವಿನ್ನಿಬೋಲ್ಡ್ ಮೆಂಡೋನ್ಸಾ, ವಿವೇಕಾನಂದ ಶೆಣೈ, ಪ್ರತಿಮ ಮೋಹನ್, ವಕ್ತಾರ ಬಿಪಿನ್‍ಚಂದ್ರಪಾಲ್ ನಕ್ರೆ ಮುಂತಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ವಿಘ್ನೇಶ್ ಕಿಣಿ ಕಾರ್ಯಕ್ರಮ ನಿರೂಪಿಸಿದರು.







