ರಸ್ತೆ ಅಭಿವೃದ್ಧಿಗೆ 4.50 ಕೋಟಿ ಬಿಡುಗಡೆ: ಡಾ.ಮೋಟಮ್ಮ
ಮೂಡಿಗೆರೆ, ಜ.29: ಮೂಡಿಗೆರೆ ತಾಲೂಕು ವ್ಯಾಪ್ತಿಯಲ್ಲಿ ಸುಮಾರು 4.50 ಕೋಟಿ ರೂ.ಗಳಲ್ಲಿ ಕಾಮಗಾರಿ ಕೈಗೆತ್ತಿಕೊಳ್ಳಲು ಅನುದಾನ ಬಿಡುಗಡೆ ಮಾಡಲಾಗಿದೆ ಎಂದು ಎಂಎಲ್ಸಿ ಡಾ. ಶ್ರೀಮತಿ ಮೋಟಮ್ಮ ತಿಳಿಸಿದ್ದಾರೆ.
ಅವರು ಈ ಕುರಿತು ಹೇಳಿಕೆ ನೀಡಿದ್ದು, ಹ್ಯಾಂಡ್ಪೋಸ್ಟ್-ದಾರದಹಳ್ಳಿ-ಗೌಡಹಳ್ಳಿ-ಊರುಬಗ್ಗೆ ರಸ್ತೆ ಮತ್ತು ಕುಂದೂರು-ತತ್ಕೊಳದಿಂದ ಹುಲ್ಲೇಮನೆ ಬೈಪಾಸ್ ತನಕದ ರಸ್ತೆ ಹಾಗೂ ಕಗ್ಗನಾಳ-ತನೂಡಿ ರಸ್ತೆ ಅಭಿವೃದ್ಧಿಗೆ ತಲಾ 1 ಕೋಟಿ ರೂ.ಗಳ ಅನುದಾನ ಹಂಚಿಕೆ ಮಾಡಲಾಗಿದೆ ಎಂದಿದ್ದಾರೆ.
ಹೆಸಗಲ್-ಚಿಕ್ಕಳ್ಳ-ಸತ್ತಿಹಳ್ಳಿ-ಗುಲ್ಲನ್ಪೇಟೆ ಮತ್ತು ಬಸ್ಕಲ್-ಹಾಂದಿ-ದೊಡ್ಡನಗುಡ್ಡ ಹಾಗೂ ಅವುತಿ ಹೋಬಳೀಯ ಅಗಳ-ಹೊಲದಬೈಲು ರಸ್ತೆ ಅಭಿವೃದ್ದಿಗೆ ತಲಾ 50 ಲಕ್ಷ ರೂ.ಗಳ ಅನುದಾನ ಬಿಡುಗಡೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.
Next Story