ತಲಪಾಡಿ ಎಸ್‍ಕ್ಯೂಎಸ್ ಕಾಲೇಜಿನಲ್ಲಿ ಗಣರಾಜ್ಯೋತ್ಸವ ಆಚರಣೆ

ಉಳ್ಳಾಲ,ಜ.29: ಸ್ಕೂಲ್ ಆಫ್ ಸೋಶಿಯಲ್ ಸ್ಡಡೀಸ್ , ಝೀನತ್ ಎಜ್ಯುಕೇಶನಲ್ ಟ್ರಸ್ಟ್ ನಲ್ಲಿ ಗಣರಾಜ್ಯೋತ್ಸವ ಆಚರಣೆಯು ನಡೆಯಿತು. ಕಾಲೇಜಿನ ಉಪಪ್ರಾಂಶುಪಾಲ ಸುಲೈಮಾನ್ ಪುರ್ಕಾನಿ ದ್ವಜಾರೋಹಣ ನೆರವೇರಿಸಿದರು.
ಕಾಲೇಜಿನ ಉಪನ್ಯಾಸಕ ಉಮರ್ ಪಾರೂಕ್ ಪುರ್ಕಾನಿ, ಅಬ್ದುಲ್ ರಝಾಕ್ ಉಮ್ರಿ, ಉಪನ್ಯಾಸಕ ಸಲ್ಮಾನ್ ಉಪಸ್ಥಿತರಿದ್ದರು.
ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ನಿಸಾರ್ ಅಹ್ಮದ್ ಸ್ವಾಗತಿಸಿದರು. ವಿದ್ಯಾರ್ಥಿ ಉಸ್ಮಾನ್ ಮಸೂದ್ ವಂದಿಸಿದರು.
Next Story





