ಜುಗಾರಿ ಅಡ್ಡೆಗೆ ದಾಳಿ : 34 ಮಂದಿ ಸೆರೆ
ಕೋಟ, ಜ.29: ಮೊಳಹಳ್ಳಿ ಗ್ರಾಮದ ಮಾಸ್ತಿಕಟ್ಟೆ ಎಂಬಲ್ಲಿ ಜ.28ರಂದು ಮಧ್ಯಾಹ್ನ ವೇಳೆ ಅಂದರ್ ಬಾಹರ್ ಇಸ್ಪೀಟ್ ಜುಗಾರಿ ಆಡುತ್ತಿದ್ದ 34 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.
ಖಚಿತ ಮಾಹಿತಿಯಂತೆ ದಾಳಿ ನಡೆಸಿದ ಉಡುಪಿ ಡಿವೈಎಸ್ಪಿ ಕುಮಾರಸ್ವಾಮಿ ನೇತೃತ್ವದ ತಂಡ ಸಂತೋಷ್ ಸೇರಿದಂತೆ ಒಟ್ಟು 34 ಮಂದಿಯನ್ನು ಬಂಧಿಸಿ, 65,000ರೂ. ನಗದು, 2 ಪೈಬರ್ ಟೇಬಲ್, 5 ಕುರ್ಚಿಗಳು, 34 ಮೊಬೈಲ್ ಸೆಟ್ಗಳನ್ನು ವಶಪಡಿಸಿಕೊಂಡಿದೆ. ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





