ಕೋಳಿ ಅಂಕ: ಏಳು ಮಂದಿ ಸೆರೆ
ಕಾಪು, ಜ.29: ಮಣಿಪುರ ಗ್ರಾಮದ ಧೂಮವತಿ ದೈವಸ್ಥಾನದ ಬಳಿ ಜ.28 ರಂದು ಮಧ್ಯಾಹ್ನ ವೇಳೆ ಕೋಳಿ ಅಂಕದಲ್ಲಿ ನಿರತರಾಗಿದ್ದ ಏಳು ಮಂದಿಯನ್ನು ಕಾಪು ಪೊಲೀಸರು ಬಂಧಿಸಿದ್ದಾರೆ.
ಮಣಿಪುರದ ದಿವಾಕರ(34), ಸೋಮಪ್ಪ(45), ಚೆನ್ನಪ್ಪ(62), ಬಾಬು (65), ಕೃಷ್ಣಪ್ಪ(43), ಮಧುಕರ(40), ಸಂತೆಕಟ್ಟೆಯ ಲವ(35) ಬಂಧಿತ ಆರೋಪಿಗಳು. ಸದಾನಂದ ಎಂಬಾತ ಪರಾರಿಯಾಗಿದ್ದಾನೆ. ಬಂಧಿತರಿಂದ ನಾಲ್ಕು ಕೋಳಿ ಹಾಗೂ 2 ಕೋಳಿ ಬಾಲ್ ಮತ್ತು 700ರೂ. ನಗದು ವಶಪಡಿಸಿ ಕೊಳ್ಳಲಾಗಿದೆ. ಈ ಬಗ್ಗೆ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





