ಜ.31 ರಂದು ವಿದ್ಯಾರ್ಥಿಗಳಿಗೆ ಉಚಿತ ಗಣಿತ ಕಾರ್ಯಾಗಾರ
ಬೆಂಗಳೂರು, ಜ.29: ವಸಿಸ್ಟ ಎಜ್ಯುವೆಂಚರ್ಸ್ ಸಂಸ್ಥೆ ವತಿಯಿಂದ ಸರಕಾರಿ ಹಾಗೂ ಖಾಸಗಿ ಶಾಲೆಯ ಪ್ರೌಢಶಾಲೆಯ ವಿದ್ಯಾರ್ಥಿಗಳಿಗಾಗಿ ಜ.31 ರಂದು ಉಚಿತ ವೇದಗಣಿತ ಮತ್ತು ಭಾರತೀಯ ಗಣಿತ ಕಾರ್ಯಾಗಾರವನ್ನು ಆಯೋಜಿಸಿದೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಂಸ್ಥೆಯ ಸದಸ್ಯೆ ಮಮತಾ ಶಿವಕೋಟಿ, ಭಾರತೀಯ ಪ್ರಾಚೀನ ವಿಜ್ಞಾನವನ್ನು ಇಂದಿನ ಪೀಳಿಗೆಗೆ ಪರಿಚಯಿಸುವ ಜೊತೆಗೆ ಶಾಲಾ ಪಠ್ಯಗಳಿಗೆ ಉಪಯೋಗಿಸುವ ಮಹತ್ವದ 50ಕ್ಕೂ ಅಧಿಕ ಗಣಿತದ ವಿಧಾನಗಳನ್ನು ಸಂಸ್ಥೆಯ ವಿನೂತನ್ ಪರಿಚಯಿಸಲಿದ್ದಾರೆ ಎಂದು ಹೇಳಿದರು.
ಈ ತರಗತಿಗಳು ವಿದ್ಯಾರ್ಥಿಗಳ ಮುಂದಿನ ಭವಿಷ್ಯಕ್ಕಾಗಿ ಹಾಗೂ ಸ್ಪರ್ಧಾತ್ಮಕ ಪರೀಕ್ಷೆಗಳೀಗೆ ಉಪಯೋಗವಾಗಲಿದೆ. ಇದರಲ್ಲಿ ಭಾಗವಹಿಸುವ ವಿದ್ಯಾರ್ಥಿಗಳು ಹೆಚ್ಚಿನ ಮಾಹಿತಿಗಾಗಿ 81055 99557 ಸಂಖ್ಯೆಯನ್ನು ಸಂಪರ್ಕಿಬಹುದು ಎಂದು ಅವರು ತಿಳಿಸಿದರು.
Next Story





